ಕಾರ್ಕಳ: ಜೂನ್ 2ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ

Update: 2023-06-01 16:04 GMT

ಉಡುಪಿ, ಜೂ.1: 110/11ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬೈಲೂರು ಎಕ್ಸ್‌ಪ್ರೆಸ್, ಕೆ.ಹೆಚ್.ಬಿ.ಕಾಲೋನಿ ಮತ್ತು ನಕ್ರೆ ಫೀಡರ್ ಮಾರ್ಗದಲ್ಲಿ ಲೈನ್‌ಶಿಪ್ಟಿಂಗ್ ಕಾಮಗಾರಿ ಹಮ್ಮಿ ಕೊಂಡಿರುವುದರಿಂದ ಬೈಲೂರು, ಜಾರ್ಕಳ, ನೀರೆ, ಎರ್ಲಪಾಡಿ, ಕೌಡೂರು, ಪರಪು, ಗುಂಡ್ಯಡ್ಕ, ಬೋರ್ಗಲ್‌ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಕೆ.ಹೆಚ್.ಬಿ.ಕಾಲೋನಿ, ಜೋಡುರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಜೂನ್ 2ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Similar News