ಬಿಐಇಆರ್‌ಟಿ ಹುದ್ದೆ: ಅರ್ಜಿ ಆಹ್ವಾನ

Update: 2023-06-02 14:45 GMT

ಉಡುಪಿ, ಜೂ.2: ಪ್ರಸಕ್ತ ಸಾಲಿನ ಸಮಗ್ರ ಶಿಕ್ಷಣ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ ಹುದ್ದೆಗಳನ್ನು ನೇರಗುತ್ತಿಗೆ ಆಧಾರದ ಮೇಲೆ ನಿಗದಿತ ವಿದ್ಯಾರ್ಹತೆ ಇರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂನ್ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪಯೋಜನಾ ಸಮನ್ವಯಾಧಿಕಾರಿ, ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ರಜತಾದ್ರಿ, ಇವರನ್ನು  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

Similar News