ಎಲ್ಲೂರು ಗ್ರಾಮದಲ್ಲಿ ಗೋ ರುದ್ರಭೂಮಿ ನಿರ್ಮಾಣಕ್ಕೆ ಚಾಲನೆ

Update: 2023-06-02 16:05 GMT

ಕಾಪು, ಜೂ.2: ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೋಶಾಲೆ ಹಾಗೂ ಗೋ ರುದ್ರಭೂಮಿ ನಿರ್ಮಾಣದ ಉದ್ದೇಶಕ್ಕೆ ಕಾಯ್ದಿರಸಲಾದ 3.96 ಎಕರೆ  ಜಮೀನಿನಲ್ಲಿ ಇಂದು ಅದಮಾರು ಮಠದ ಶ್ರೀಈಶಪ್ರಿಯ ಸ್ವಾಮೀಜಿ ಗೋ ಪೂಜೆ ನೆರವೇರಿಸುವ ಮೂಲಕ ಗೋ ರುದ್ರಭೂಮಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಎಲ್ಲರೂ ಗ್ರಾಪಂ ಅಧ್ಯಕ್ಷ ಕೆ.ಜಯಂತ್ ಕುಮಾರ್, ಜಿಪಂ ಮಾಜಿ ಸದಸ್ಯೆ ಶಿಲ್ಪಾಜಿ.ಸುವರ್ಣ, ತಾಪಂ ಮಾಜಿ ಸದಸ್ಯ ಕೇಶವ ಮೊಯ್ಲಿ, ಕಾಪು ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಕಾಪು ಮುಖ್ಯ ಪಶುವೈದ್ಯಾಧಿಕಾರಿ ಡಾ.ಅರುಣ್ ಹೆಗ್ಡೆ, ಪಶು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್, ಕಾಪು ತಾಪಂ ಸಹಾಯಕ ಅಭಿಯಂತರ ಚಂದ್ರಕಲಾ, ಎಲ್ಲೂರು ಗ್ರಾಪಂ ಪಿಡಿಓ ಪ್ರದೀಪ್  ಉಪಸ್ಥಿತರಿ ದ್ದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

Similar News