ರೈಲುಗಳು ಢಿಕ್ಕಿ ಹೊಡೆದ ಒಡಿಶಾದ ಬಾಲಸೋರ್ ನಲ್ಲಿ 'ಕವಚ' ಸುರಕ್ಷತಾ ವ್ಯವಸ್ಥೆ ಇರಲಿಲ್ಲ

Update: 2023-06-03 07:23 GMT

ಹೊಸದಿಲ್ಲಿ: ಚಾಲಕನ ದೋಷ ಅಥವಾ ಇತರ ಕಾರಣಗಳಿಂದ ರೈಲು ಅಪಘಾತಗಳನ್ನು ತಡೆಗಟ್ಟಲು ಭಾರತೀಯ ರೈಲ್ವೇ ಅಭಿವೃದ್ಧಿಪಡಿಸಿದ ಕವಚ ವ್ಯವಸ್ಥೆಯು ಬಾಲಸೋರ್‌ನಲ್ಲಿ ಕಳೆದ ರಾತ್ರಿ ಮೂರು ರೈಲುಗಳು ಡಿಕ್ಕಿ ಹೊಡೆದು 230 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ,  ಸುಮಾರು 900 ಮಂದಿ ಗಾಯಗೊಂಡಿರುವ  ಹಳಿಗಳ ಮೇಲೆ ಲಭ್ಯವಿರಲಿಲ್ಲ ಎಂದು ತಿಳಿದುಬಂದಿದೆ.

"ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ನಾವು  ಮುಂದಿನ ಕಾರ್ಯವನ್ನು ಆರಂಭಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆಯು ಲಭ್ಯವಿರಲಿಲ್ಲ" ಎಂದು ಭಾರತೀಯ ರೈಲ್ವೇ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಸಂಜೆ 7 ಗಂಟೆಗೆ ಬಾಲಸೋರ್‌ನಲ್ಲಿ ರೈಲಿನ ಒಂದು ಬೋಗಿ ಹಳಿತಪ್ಪಿದ ನಂತರ ಮೂರು ರೈಲುಗಳು ಡಿಕ್ಕಿ ಹೊಡೆದುಕೊಂಡಿದ್ದವು.

ಕವಚ್ ಎಂಬುದು ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯಾಗಿದ್ದು, ಮೂರು ಭಾರತೀಯ ಸಂಸ್ಥೆಗಳೊಂದಿಗೆ ಜಂಟಿಯಾಗಿ ಸಂಶೋಧನಾ ವಿನ್ಯಾಸ  ಹಾಗೂ ಗುಣಮಟ್ಟ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಕವಚವು ಲೋಕೋಮೋಟಿವ್ ಡ್ರೈವರ್‌ಗಳಿಗೆ ಅಪಾಯದ ಸಂಕೇತಗಳನ್ನು ತಪ್ಪಿಸಲು ಮತ್ತು ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  ಆದರೆ ಕಡಿಮೆ-ಗೋಚರತೆಯ ಪರಿಸ್ಥಿತಿಗಳಲ್ಲಿ ರೈಲುಗಳು ಸುರಕ್ಷಿತವಾಗಿ ಓಡುವುದನ್ನು ಖಚಿತಪಡಿಸುತ್ತದೆ.

Similar News