ಒಡಿಶಾ ರೈಲು ದುರಂತ: ತಾಂತ್ರಿಕ ದೋಷವೋ ಅಥವಾ ಮಾನವನ ತಪ್ಪೋ?

Update: 2023-06-03 08:52 GMT

ಹೊಸದಿಲ್ಲಿ: ಒಡಿಶಾದಲ್ಲಿ ಶುಕ್ರವಾರ ಸಂಜೆ ಮೂರು ರೈಲುಗಳ ಅಪಘಾತದಲ್ಲಿ 230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ, ಇದಕ್ಕೆ ಕಾರಣವಾಗಿರಬಹುದಾದ ಕಾರ್ಯಾಚರಣೆಯ ವೈಫಲ್ಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.

ಶುಕ್ರವಾರ ಸಂಜೆ 6.50 ರಿಂದ 7.10 ರ ನಡುವೆ ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ನಡುವೆ ಎರಡು ಘರ್ಷಣೆಗಳು ಸಂಭವಿಸಿದ್ದು,ಪುಡಿಯಾಗಿರುವ ಕಂಪಾರ್ಟ್‌ಮೆಂಟ್‌ಗಳು ಹಾಗೂ  ಕೋಚ್‌ಗಳು ಒಂದರ ಮೇಲೊಂದು ಬಿದ್ದಿವೆ.

ಪ್ಯಾಸೆಂಜರ್ ರೈಲು, ಕೋರಮಂಡಲ್ ಶಾಲಿಮಾರ್ ಎಕ್ಸ್‌ಪ್ರೆಸ್, ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಹಳಿತಪ್ಪಿತು,ಇನ್ನೊಂದು ರೈಲು, ಯಶವಂತಪುರ-ಹೌರಾ ಸೂಪರ್‌ಫಾಸ್ಟ್, ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ.

ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆಗೆ ರೈಲ್ವೆ ಸಚಿವಾಲಯ ಆದೇಶಿಸಿದೆ.

ಬೆನ್ನುಬೆನ್ನಿಗೆ ಅಪಘಾತಗಳು  ಹೇಗೆ ಸಂಭವಿಸಿದವು ಎಂಬುದರ ಕುರಿತು ಒಂದಕ್ಕಿಂತ ಹೆಚ್ಚು ವಾದಗಳಿವೆ, ಆದರೆ ಒಂದೇ ಸ್ಥಳದಲ್ಲಿ ಮೂರು ರೈಲುಗಳು ಹಾಗೂ ಎರಡು ಢಿಕ್ಕಿಗಳು ನಡೆದಿವೆ ಎಂಬುದು ಖಚಿತವಾಗಿದೆ

ಅಪಘಾತದ ಸುತ್ತ ಅನೇಕ ಪ್ರಶ್ನೆಗಳು ಎದ್ದಿದ್ದು,  ಕೋರಮಂಡಲ್-ಶಾಲಿಮಾರ್ ಎಕ್ಸ್‌ಪ್ರೆಸ್ ಸರಕು ಸಾಗಣೆಯ  ರೈಲಿನ ಅದೇ ಟ್ರ್ಯಾಕ್‌ನಲ್ಲಿ ಹೇಗೆ ಇತ್ತು ಎಂಬುದು ಪ್ರಶ್ನೆಯಾಗಿದ್ದು, ಇದು ತಾಂತ್ರಿಕ ದೋಷವೋ ಅಥವಾ ಮಾನವನ ತಪ್ಪೋ? ಎಂಬ ಚರ್ಚೆ ಎದ್ದಿದೆ.

ಒಂದೇ  ಸ್ಥಳದಲ್ಲಿ ಮೂರು ರೈಲುಗಳ ನಡುವೆ ಡಿಕ್ಕಿಗಳು ಸಂಭವಿಸಿರುವ ಕಾರಣ ಅನೇಕರು ಸಿಗ್ನಲ್ ದೋಷದ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.

ಅಪಘಾತ ಸಂಭವಿಸಿದ ಮಾರ್ಗದಲ್ಲಿ ಕವಚ ವ್ಯವಸ್ಥೆ ಲಭ್ಯವಿರಲಿಲ್ಲ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.

ರೈಲ್ವೇ ಸಚಿವಾಲಯವು ದೇಶಾದ್ಯಂತ "ಕವಚ" ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ರೈಲು ಢಿಕ್ಕಿಗೆ ಪ್ರಮುಖ ಕಾರಣವಾಗಿರುವ ಸಿಗ್ನಲ್ ಅನ್ನು ಜಂಪ್ ಮಾಡಿದಾಗ ಕವಚ್ ಎಚ್ಚರಿಸುತ್ತದೆ. ಈ ವ್ಯವಸ್ಥೆಯು ರೈಲು ಚಾಲಕನನ್ನು ಎಚ್ಚರಿಸಬಹುದು, ಅದೇ ಹಳಿಗಳಲ್ಲಿ ಮತ್ತೊಂದು ರೈಲನ್ನು ಗಮನಿಸಿದಾಗ ಚಾಲಕಬ್ರೇಕ್‌ಗಳ ಮೇಲೆ ನಿಯಂತ್ರಣ ಸಾಧಿಸಿ ರೈಲನ್ನು  ನಿಲ್ಲಿಸಬಹುದು.

Similar News