ರೈಲು ದುರಂತದ ತನಿಖೆ ಪೂರ್ಣ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Update: 2023-06-04 05:56 GMT

ಬಾಲಸೋರ್: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ಡಿಕ್ಕಿ ದುರಂತದಲ್ಲಿ 288 ಜನರು ಸಾವನ್ನಪ್ಪಿರುವ ಹಾಗೂ  1,000 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಕಾರಣವನ್ನು ಗುರುತಿಸಲಾಗಿದೆ ಹಾಗೂ ಅದನ್ನು  ವರದಿಯಲ್ಲಿ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnaw )ರವಿವಾರ ಹೇಳಿದ್ದಾರೆ.

ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ರೈಲು ಅಪಘಾತಗಳಲ್ಲಿ ಒಂದಾದ ಶುಕ್ರವಾರ ಸಂಜೆ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಹಳಿಗಳ ಮೇಲೆ ಎರಡು ಪ್ರಯಾಣಿಕ ರೈಲುಗಳು ಹಾಗೂ  ಗೂಡ್ಸ್ ಕ್ಯಾರೇಜ್ ಡಿಕ್ಕಿ ಹೊಡೆದು 17 ಬೋಗಿಗಳಿಗೆ ತೀವ್ರ ಹಾನಿಯಾಗಿದೆ.

ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ವೈಷ್ಣವ್ ಅವರು, "ಈ ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ. ಪ್ರಧಾನಿ ಮೋದಿ ನಿನ್ನೆ ಸ್ಥಳವನ್ನು ಪರಿಶೀಲಿಸಿದರು. ನಾವು ಇಂದು ಟ್ರ್ಯಾಕ್ ಅನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತೇವೆ. ಎಲ್ಲಾ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬುಧವಾರ ಬೆಳಿಗ್ಗೆ ಮರುಸ್ಥಾಪನೆ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ ಇದರಿಂದ ಈ ಮಾರ್ಗದಲ್ಲಿ ರೈಲುಗಳು ಓಡಲು ಆರಂಭಿಸಬಹುದು ಎಂದು  ಹೇಳಿದರು.

Similar News