ಗುಜರಾತ್: 19 ಗಂಟೆಗಳ ಕಾರ್ಯಾಚರಣೆ ಬಳಿಕವೂ ಕೊಳವೆ ಬಾವಿಗೆ ಬಿದ್ದಿದ್ದ ಮಗು ಮೃತ್ಯು

Update: 2023-06-04 16:50 GMT

ಜಾಮನಗರ: ಗುಜರಾತಿನ ಜಾಮ್‌ನಗರ ಜಿಲ್ಲೆಯ ತಮಚಾನ್ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಜಾರಿ ಬಿದ್ದು 20 ಅಡಿ ಆಳದಲ್ಲಿ ಸಿಕ್ಕಿಕೊಂಡಿದ್ದ ಎರಡು ವರ್ಷದ ಹೆಣ್ಣುಮಗು 19 ಗಂಟೆಗಳ ಕಠಿಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೂ ಬದುಕುಳಿಯಲಿಲ್ಲ.

ಗ್ರಾಮದ ಹೊಲವೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಬುಡಕಟ್ಟು ಕುಟುಂಬಕ್ಕೆ ಸೇರಿದ ಮಗು ಶನಿವಾರ ಬೆಳಿಗ್ಗೆ 9:30ರ ಸುಮಾರಿಗೆ ಆಟವಾಡುತ್ತಿದ್ದಾಗ 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು. ಸ್ಥಳಕ್ಕೆ ಧಾವಿಸಿದ್ದ ಸೇನೆ, NDRF ಮತ್ತು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾಲಕಿಯನ್ನು ಉಳಿಸಲು 11 ಗಂಟೆಯ ಸುಮಾರಿಗೆ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು.

ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರವಿವಾರ ನಸುಕಿನ 5:45ರ ಸುಮಾರಿಗೆ ಬಾಲಕಿಯನ್ನು ಹೊರಕ್ಕೆ ತೆಗೆಯಲಾಗಿದೆಯಾದರೂ ಆ ವೇಳೆಗಾಗಲೇ ಆಕೆ ಕೊನೆಯುಸಿರೆಳೆದಿದ್ದಳು ಎಂದು ಜಾಮನಗರ ತಾಲೂಕಾಭಿವೃದ್ಧಿ ಅಧಿಕಾರಿ ಎನ್.ಎ.ಸರ್ವೈಯಾ ತಿಳಿಸಿದರು.

Similar News