×
Ad

ಹಿರಿಯ ರಂಗ ನಿರ್ದೇಶಕ-ನಟ ಆಮಿರ್ ರಝಾ ಹುಸೇನ್ ನಿಧನ‌

Update: 2023-06-04 23:03 IST

ಹೊಸದಿಲ್ಲಿ: ಹೃದ್ರೋಗದಿಂದ ಬಳಲುತ್ತಿದ್ದ ಹಿರಿಯ ರಂಗ ನಿರ್ದೇಶಕ-ನಟ ಆಮಿರ್ ರಝಾ ಹುಸೇನ್ (66) ಅವರು ಶನಿವಾರ ಇಲ್ಲಿ ನಿಧನರಾದರು.

ಎರಡು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚೇತರಿಸಿಕೊಳ್ಳದ ಅವರು ಶನಿವಾರ ಕೊನೆಯುಸಿರೆಳೆದರು ಎಂದು ಹುಸೇನ್ರ ಪುತ್ರ ಗುಲಾಮ್ ಅಲಿ ಅಬ್ಬಾಸ್ ಸುದ್ದಿಸಂಸ್ಥೆಗೆ ತಿಳಿಸಿದರು.

91ಕ್ಕೂ ಅಧಿಕ ನಿರ್ಮಾಣಗಳು ಮತ್ತು ಸ್ಟೇಜ್ಡೋರ್ ಥಿಯೇಟರ್ ಕಂಪನಿಯೊಂದಿಗೆ ಅದರ ಸೃಜನಾತ್ಮಕ ನಿರ್ದೇಶಕರಾಗಿ ಒಂದು ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದ ಹುಸೇನ್ 1999ರ ಕಾರ್ಗಿಲ್ ಯುದ್ಧವನ್ನು ಆಧರಿಸಿದ್ದ ‘ದಿ ಫಿಫ್ಟಿ ಡೇ ವಾರ್ ’ ಮತ್ತು ಹಿಂದು ಮಹಾಕಾವ್ಯ ರಾಮಾಯಣದಿಂದ ಪ್ರೇರಿತ ‘ದಿ ಲೆಜೆಂಡ್ ಆಫ್ ರಾಮ್ ’ಗಳಂತಹ ರಂಗ ಪ್ರದರ್ಶನಗಳಿಂದ ಹೆಸರುವಾಸಿಯಾಗಿದ್ದರು.

ರುಡ್ಯಾರ್ಡ್ ಕಿಪ್ಲಿಂಗ್ ಅವರ ಕಾದಂಬರಿ ಆಧಾರಿತ ಇಂಗ್ಲಿಷ್ ಚಿತ್ರ ‘ಕಿಮ್’ (1984) ಮತ್ತು ಬಾಲಿವುಡ್ ಚಿತ್ರ ‘ಖೂಬ್ಸೂರತ್’(2014)ನಲ್ಲಿಯೂ ಹುಸೇನ್ ನಟಿಸಿದ್ದರು.

Similar News