ಎಎಪಿ ನಾಯಕ ಮನೀಶ್ ಸಿಸೋಡಿಯಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್

Update: 2023-06-05 11:47 GMT

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು  ದಿಲ್ಲಿ  ಹೈಕೋರ್ಟ್ ಇಂದು ತಿರಸ್ಕರಿಸಿದೆ.

ತಮ್ಮ ಅನಾರೋಗ್ಯ ಪೀಡಿತ  ಪತ್ನಿಯನ್ನು ನಾನೊಬ್ಬನೇ ನೋಡಿಕೊಳ್ಳಬೇಕಾಗಿರುವ  ಕಾರಣಕ್ಕಾಗಿ ತನ್ನನ್ನು ಬಿಡುಗಡೆ ಮಾಡುವಂತೆ  ಕೋರಿದ್ದರು.

ಸಿಸೋಡಿಯಾ ಅವರ ಜಾಮೀನು ತಿರಸ್ಕೃತವಾಗಿದ್ದರೂ ಕೂಡ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಸಿಸೋಡಿಯಾ  ಅವರು  ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಅವರ ಅನುಕೂಲಕ್ಕೆ ಅನುಗುಣವಾಗಿ ಒಂದು ದಿನ ಭೇಟಿಯಾಗಲು ಅವಕಾಶ ನೀಡಿದ್ದಾರೆ.

ಮಾರ್ಚ್ 9 ರಂದು ಬಂಧಿತರಾಗಿದ್ದ  ಸಿಸೋಡಿಯಾ ಅವರು ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದಿಲ್ಲಿಯ ಅಬಕಾರಿ ನೀತಿಯನ್ನು ಎಎಪಿ ಸರ್ಕಾರವು ನವೆಂಬರ್ 2021 ರಲ್ಲಿ ಜಾರಿಗೊಳಿಸಿತು. ಭ್ರಷ್ಟಾಚಾರದ ಆರೋಪಗಳ ನಡುವೆ ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಅದನ್ನು ರದ್ದುಗೊಳಿಸಲಾಯಿತು.
 

Similar News