ಕಾಪು: ಬೀಟ್ ದಿ ಪ್ಲಾಸ್ಟಿಕ್ ಜಾಗೃತಿ ಅಭಿಯಾನ

Update: 2023-06-05 14:03 GMT

ಉಡುಪಿ, ಜೂ.5: ರಾಜ್ಯದ ಕರಾವಳಿ ಭಾಗದಲ್ಲಿ ‘ಪ್ಲಾಸ್ಟಿಕ್ ಅನ್ನು ತಿರಸ್ಕರಿಸಿ, ಬಳಕೆ ಕಡಿಮೆ ಮಾಡಿ ಮತ್ತು ಮರುಬಳಕೆ ಮಾಡಿ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಎನ್‌ಸಿಸಿ ಉಡಾನ್ ಸಹಯೋಗದಲ್ಲಿ ಮೇ 27 ರಂದು ಕಾರವಾರದಿಂದ ಆರಂಭವಾದ ‘ಬೀಟ್ ದಿ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಯಾತ್ರೆ’ಯು ಕರಾವಳಿಯ ವಿವಿಧ ಭಾಗಗಳಲ್ಲಿ ಸಂಚರಿಸಿದ್ದು, ಕಾರವಾರ, ಗೋಕರ್ಣ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಬೈಂದೂರು, ಮರವಂತೆ, ಕೆಮ್ಮಣ್ಣು ಹೊಡೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡಿದೆ. 

ಕಾಪುನಲ್ಲಿ ನಡೆದ ಅಭಿಯಾನದಲ್ಲಿ ಮಾತನಾಡಿದ, ಉಡುಪಿ ಪರಿಸರ ಅಧಿಕಾರಿ ಡಾ.ರಾಜು, ಪ್ಲಾಸ್ಟಿಕ್‌ನ್ನು ನಿರಾಕ ರಿಸು, ಕಡಿಮೆ ಮಾಡಿ, ಬಳಕೆ ಕಡಿಮೆ ಮಾಡಿ, ಮರುಬಳಕೆ ಮಾಡಿ’ ಎಂಬುದು ಕೇವಲ ಘೋಷಣೆ ಗಳಾಗಬಾ ರದು. ಅದು ನಮ್ಮ ಜೀವನದ ತತ್ವವಾಗಬೇಕು ಎಂದರು.

ಈ ಅಭಿಯಾನಕ್ಕೆ ವಿವಿಧ ಸ್ವಯಂಸೇವಾ ಸಂಘಟನೆಗಳು, ಎನ್‌ಜಿಓ ಗಳು, ಸ್ವಿಮ್ಮರ್ಸ್ ಫೌಂಡೇಶನ್ ಮತ್ತು ಅದಾನಿ ಪವರ್ ಲಿಮಿಟೆಡ್, ಬ್ರೈಟ್ ಫ್ಲೆಕ್ಸಿ ಇಂಟರ್ನ್ಯಾಷನಲ್ ಮುಂತಾದ ಉದ್ಯಮಗಳು ಬೆಂಬಲ ನೀಡಿದ್ದು, ಎನ್‌ಸಿಸಿ ಉಡಾನ್ ಕರ್ನಾಟಕ ವಿಭಾಗ ರಾಜ್ಯ ಕಾರ್ಯದರ್ಶಿ ಸುನಿಲ್ ಕೆ.ಜಿ ಸಹಕರಿಸಿದ್ದರು. 

ಎನ್‌ಸಿಸಿ ಕೆಡೆಟ್‌ಗಳು, ಕೋಸ್ಟಲ್ ಗಾರ್ಡ್‌ಗಳು, ನೌಕಾಪಡೆಯ ಅಧಿಕಾರಿಗಳು, ಕೈಗಾರಿಕಾ ಕಾರ್ಯಕರ್ತರು, ಎನ್‌ಜಿಒಗಳು ಮತ್ತು ಸಾರ್ವಜನಿಕರನ್ನು ಒಳಗೊಂಡ 3000ಕ್ಕೂ ಹೆಚ್ಚು ಸ್ವಯಂಸೇವಕರ ಬೆಂಬಲದೊಂದಿಗೆ ಈ ಅಭಿಯಾನದಲ್ಲಿ ಇದುವರೆಗೆ, ಸುಮಾರು 6.5 ಟನ್‌ಗಳಷ್ಟು ಪ್ಲಾಸ್ಟಿಕ್ ಸಂಗ್ರಹಿಸಲಾಗಿದ್ದು, ವಿಶ್ವ ಪರಿಸರ ದಿನದಂದು ಬೈಕಂಪಾಡಿ ಮತ್ತು ಪಣಂಬೂರು ಬೀಚ್‌ನಲ್ಲಿ ಈ ಜಾಗೃತಿ ಅಭಿಯಾನ ಕೊನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Similar News