ಪಕ್ಷಿ ವೀಕ್ಷಣೆ ಎಲ್ಲಾ ಗ್ರಾಪಂಗಳಲ್ಲಿಯೂ ನಡೆಯಲಿ: ಜಿಪಂ ಸಿಇಓ ಪ್ರಸನ್ನ

Update: 2023-06-05 15:15 GMT

ಉಡುಪಿ, ಜೂ.5: ಪಕ್ಷಿ ವೀಕ್ಷಣೆಯಂತ ವಿಶಿಷ್ಟ ಕಾರ್ಯಕ್ರಮವು ಜಿಲ್ಲೆಯಲ್ಲಿ ಮಾತ್ರಲ್ಲದೆ ರಾಜ್ಯದಲ್ಲಿಯೇ ಪ್ರಥಮ. ಇಂತಹ ವೈಶಿಷ್ಟ್ಯಮಯ ಕಾರ್ಯ ಕ್ರಮಗಳನ್ನು ಎಲ್ಲಾ ಗ್ರಾಮ ಪಂಚಾಯತ್‌ನಲ್ಲಿ ಮಾಡುವಂತಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್. ಹೇಳಿದ್ದಾರೆ.

ಹಾವಂಜೆ ಗ್ರಾಮ ಪಂಚಾಯತ್‌ನ ಜೀವ ವೈವಿಧ್ಯ ನಿರ್ವಹಣಾ ಸಮಿತಿ ವತಿಯಿಂದ ಹಾವಂಜೆ ಶ್ರೀಮಹಾಲಿಂಗೇ ಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಆಯೋಜಿಸಲಾದ ಅಂತಾ ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಾವಂಜೆ ಹಕ್ಕಿಗಳ ನಾಮ ಫಲಕ ಅನಾವರಣ ಗೊಳಿಸಿ ಅವರು ಮಾತನಾಡುತಿದ್ದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪ್ರಕೃತಿಯು ಸಮ ತೋಲನೆಯಲ್ಲಿ ಇರಬೇಕಾದರೆ ನಮ್ಮ ಸುತ್ತಮುತ್ತಲಿನ ಜೀವವೈವಿಧ್ಯತೆಗಳನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಗೋಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಭಾಸ ಗ್ಯಾಲರಿ ಮತ್ತು ಸ್ಟುಡಿ ಯೋದ ನಿರ್ದೇಶಕ ಡಾ.ಜನಾರ್ದನ ಹಾವಂಜೆ  ಹಾಗೂ ಪಕ್ಷಿ ತಜ್ಞ ತೇಜಸ್ವಿ ಆಚಾರ್ಯ ಹಾವಂಜೆ ಹಕ್ಕಿಗಳ ಕುರಿತು ಮಾಹಿತಿಯನ್ನು ಬಿತ್ತಿಚಿತ್ರದ ಮೂಲಕ ಪ್ರಸ್ತುತಿಪಡಿಸಿದರು.

ಇದೇ ಸಂದರ್ಭದಲ್ಲಿ ಹಾವಂಜೆ ಹಕ್ಕಿಗಳ ಕುರಿತು ಬಿತ್ತಿ ಚಿತ್ರಗಳ ಕಲಾ ಪ್ರದರ್ಶನವು ನಡೆದಿತ್ತು. ಗ್ರಾಪಂ ವ್ಯಾಪ್ತಿಯ ವಿಶಿಷ್ಟ ಸಾಧಕರಾದ ಗುಣಪಾಲ ಶೆಟ್ಟಿ(ನಾಟಿ ವೈದ್ಯ), ಸುಮತಿ ಶೆಟ್ಟಿ(ನಾಟಿ ವೈದ್ಯ), ಡಾ.ಜನಾರ್ದನ್ ರಾವ್ ಹಾವಂಜೆ(ಕಲಾವಿದ) ಅವರನ್ನು ಸಮ್ಮಾನಿಸಲಾಯಿತು.

ಉಪಾಧ್ಯಕ್ಷ ಸುಜಾತ ಯು.ಶೆಟ್ಟಿ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿ ಕಾರಿ ಎಚ್.ವಿ.ಇಬ್ರಾಹಿಂಪುರ್, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥನ್, ವಲಯ ಅರಣ್ಯ ಅಧಿಕಾರಿ ಅನುಷಾ ಭಟ್, ಗ್ರಾಪಂ ಸದಸ್ಯರು, ಶಾಲಾ ಮುಖ್ಯೋಪಾ ಧ್ಯಾಯರು, ಶಿಕ್ಷಕರು, ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ, ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೊಜಕಿ, ಗ್ರಂಥಾಲಯ ಮೇಲ್ವಿಚಾರಕಿ, ಪಂಚಾಯತ್ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿವ್ಯ ಎಸ್. ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಸಿಬ್ಬಂದಿ ಸದಾಶಿವ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

Similar News