ಒಡಿಶಾ ರೈಲು ಅಪಘಾತದಲ್ಲಿ ಟಿಎಂಸಿ ಕೈವಾಡ: ಸುವೇಂದು ಅಧಿಕಾರಿ

Update: 2023-06-06 16:51 GMT

ಭುವನೇಶ್ವರ: ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಹಿಂದೆ ತೃಣಮೂಲ ಕಾಂಗ್ರೆಸ್ನ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಮಂಗಳವಾರ ಆರೋಪಿಸಿದ್ದಾರೆ. ‘‘ಈ ಘಟನೆ ಇನ್ನೊಂದು ರಾಜ್ಯದಲ್ಲಿ ನಡೆದಿರುವಾಗ ಅವರು ನಿನ್ನೆಯಿಂದ ಇಷ್ಟೊಂದು ಹೆದರುತ್ತಿದ್ದಾರೆ ಯಾಕೆ? ಅವರು ಸಿಬಿಐ ತನಿಖೆಗೆ ಹೆದರುತ್ತಿದ್ದಾರೆ ಯಾಕೆ?’’ ಎಂದು ಸುವೇಂದು ಅಧಿಕಾರಿ ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಅವರು ಸೋಮವಾರ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಇಬ್ಬರು ರೈಲ್ವೆ ಅಧಿಕಾರಿಗಳ ನಡುವಿನ ಸಂಭಾಷಣೆಯ ಅಡಿಯೊ ತುಣುಕನ್ನು ಕೂಡ ಸುವೇಂದು ಅಧಿಕಾರಿ ಉಲ್ಲೇಖಿಸಿದ್ದಾರೆ. ರೈಲ್ವೆ ಅಧಿಕಾರಿಗಳ ಫೋನ್ ಅನ್ನು ತೃಣಮೂಲ ಕಾಂಗ್ರೆಸ್ ಕದ್ದಾಲಿಸಿದೆ ಎಂದು ಅಧಿಕಾರಿ ಅವರು ಸೋಮವಾರ ಆರೋಪಿಸಿದ್ದಾರೆ.

‘‘ಇಬ್ಬರು ರೈಲ್ವೆ ಅಧಿಕಾರಿಗಳ ಮಾತುಕತೆಯ ಬಗ್ಗೆ ಇವರು ತಿಳಿದಿರುವುದು ಹೇಗೆ? ಈ ಮಾತುಕತೆ ಸೋರಿಕೆ ಆಗಿರುವುದು ಹೇಗೆ ? ಇದು ಸಿಬಿಐ ತನಿಖೆ ಒಳಗಡೆ ಬರಬೇಕು. ಇದು ಬರದೆ ಇದ್ದರೆ, ನಾನು ನ್ಯಾಯಾಲಯದ ಮೆಟ್ಟಿಲೇರಲಿದ್ದೇನೆ’’ ಎಂದು ಅವರು ಹೇಳಿದ್ದಾರೆ. ಈ ನಡುವೆ, ಪಶ್ಚಿಮಬಂಗಾಳದ ಬಿಜೆಪಿ ನಾಯಕ ದಿನೇಶ್ ತ್ರಿವೇದಿ, ಈ ರೈಲು ಅಪಘಾತದ ಹಿಂದೆ ನಿಖರವಾದ ಸಂಚು ಇದೆ ಎಂದು ಆರೋಪಿಸಿದ್ದಾರೆ. ಸಭೆಯ ಬಗ್ಗೆ ಮಾದ್ಯಮದ ಜತೆ ಮಾತನಾಡದಂತೆ ಸರಕಾರ ತಿಳಿಸಿತ್ತು.

Similar News