ಕೇಂದ್ರದಿಂದ ದೇಶಲ್ಲಿ 94 ಲಕ್ಷ ವಿಶಿಷ್ಟ ಅಂಗವೈಕಲ್ಯ ಐಡೆಂಟಿಟಿ ಕಾರ್ಡ್ ವಿತರಣೆ; ಪಶ್ಚಿಮಬಂಗಾಳಕ್ಕೆ ಕೇವಲ 9

Update: 2023-06-06 17:59 GMT

ಹೊಸದಿಲ್ಲಿ: ದೇಶಾದ್ಯಂತ ವಿತರಿಸಲಾದ ಒಟ್ಟು 94 ಲಕ್ಷ ವಿಶಿಷ್ಟ ಅಂಗವೈಕಲ್ಯದ ಐಡೆಂಟಿಟಿ ಕಾರ್ಡ್(ಇ ಯುಡಿಐಡಿ ಕಾರ್ಡ್)ಗಳಲ್ಲಿ ಪಶ್ಚಿಮಬಂಗಾಳಕ್ಕೆ ಇದುವರೆಗೆ ಕೇವಲ 9 ಮಾತ್ರ ನೀಡಲಾಗಿದೆ ಎಂದು ಅಧಿಕೃತ ಅಂಕಿ-ಅಂಶ ತಿಳಿಸಿದೆ.

ವಿವಿಧ ಯೋಜನೆಗಳ ಮೂಲಕ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ವಿಶಿಷ್ಟ ಅಂಗವೈಕಲ್ಯದ ಐಡೆಂಟಿಟಿ ಕಾರ್ಡ್ ಅಂಗವಿಕಲರಿಗೆ ನೆರವಾಗಲಿದೆ. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಹಂಚಿಕೊಂಡ ದತ್ತಾಂಶದ ಪ್ರಕಾರ ಇದುವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 716 ಜಿಲ್ಲೆಗಳಿಗೆ 94.30 ಲಕ್ಷ ವಿಶಿಷ್ಟ ಅಂಗವೈಕಲ್ಯದ ಐಡೆಂಟಿಟಿ ಕಾರ್ಡ್ ಗಳನ್ನು ವಿತರಿಸಲಾಗಿದೆ.

ಇದರಲ್ಲಿ ಕೇವಲ 9ನ್ನು ಮಾತ್ರ ಪಶ್ಚಿಮಬಂಗಾಳಕ್ಕೆ ನೀಡಲಾಗಿದೆ. ಆದರೆ, ಅಂಗವಿಕಲರಿಗಾಗಿ ಪಶ್ಚಿಮಬಂಗಾಳದಲ್ಲಿ ಪ್ರತ್ಯೇಕ ಯೋಜನೆ ಇದೆಯೇ ಎಂಬುದು ತಿಳಿದು ಬಂದಿಲ್ಲ

Similar News