ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಏರ್‌ ಇಂಡಿಯಾ ವಿಮಾನ: ಸಂಕಷ್ಟದಲ್ಲಿ ಪ್ರಯಾಣಿಕರು

Update: 2023-06-07 11:15 GMT

ಹೊಸದಿಲ್ಲಿ: ಮಂಗಳವಾರ ದಿಲ್ಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ 216 ಪ್ರಯಾಣಿಕರು ಹಾಗೂ 16 ಸಿಬ್ಬಂದಿಗಳನ್ನು ಹೊತ್ತ  ಏರ್‌ ಇಂಡಿಯಾ ವಿಮಾನದ ಒಂದು ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ರಷ್ಯಾದ ಮಗಡನ್‌ ಎಂಬಲ್ಲಿ ಅದು ತುರ್ತು ಭೂಸ್ಪರ್ಶ ಮಾಡಿದ್ದರೆ ನಂತರ ಆ ವಿಮಾನದ ಪ್ರಯಾಣಿಕರು ಸಂಕಷ್ಟಕ್ಕೀಡಾದ ಘಟನೆ ವರದಿಯಾಗಿದೆ.

ಪರಕೀಯ ನಾಡಿನಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧ ಪ್ರಯಾಣಿಕರು ಆಹಾರ, ಕಳಪೆ ವಸತಿ ಸೌಲಭ್ಯ ಮುಂತದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಪ್ರಯಾಣಿಕರ ಲಗೇಜುಗಳು ವಿಮಾನದಲ್ಲಿಯೇ ಇದ್ದರೂ ಅವರನ್ನು ಬಸ್ಸುಗಳಲ್ಲಿ ಬೇರೆ ಬೇರೆ ಸ್ಥಳಗಳಿಗೆ ಸಾಗಿಸಲಾಯಿತು. ಕೆಲವರನ್ನು ಶಾಲೆಗಳನ್ನು ಇರಿಸಲಾದರೆ ಇನ್ನು ಕೆಲವರನ್ನು ಹಾಸ್ಟೆಲ್‌ಗಳಿಗೆ  ಕಳುಹಿಸಲಾಯಿತು ಹಲವರು ಒಂದೇ ಮ್ಯಾಟ್ರಸ್‌ನಲ್ಲಿ ಮಲಗುವಂತಾಯಿತು. ಶೌಚಾಲಯ ಸವಲತ್ತೂ ಉತ್ತಮವಾಗಿರಲಿಲ್ಲ. ಹಲವು ಮಂದಿ ಹಿರಿಯರು ಔಷಧಿ ಕೊರತೆ ಕೂಡ ಎದುರಿಸಿರುವ ಬಗ್ಗೆ ಪ್ರಯಾಣಿಕರೊಬ್ಬರು ವಿವರಿಸಿದ್ದಾರೆ.

ಈ ಪ್ರಯಾಣಿಕರಿಗೆ ಬದಲಿ ವಿಮಾನದ ಏರ್ಪಾಟು ಮಾಡಲಾಗುವುದು ಎಂದು ಏರ್‌ ಇಂಡಿಯಾ ಇಂದು ಘೋಷಿಸಿದೆ ಹಾಗೂ ಪ್ರಯಾಣಿಕರಿಗೆ  ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಹೇಳಿದೆ.

Similar News