ಮಂಗಳೂರು - ವಿಜಯಪುರ ರೈಲು ಸಂಚಾರ ಭಾಗಶಃ ರದ್ದು

Update: 2023-06-07 13:15 GMT

ಮಂಗಳೂರು, ಜೂ.7: ಮೈಸೂರು ವಿಭಾಗದ ಸಿರಿಬಾಗಿಲು ಮತ್ತು ಯಡಕುಮರಿ ನಿಲ್ದಾಣಗಳ ನಡುವಿನ ಹಳಿಗಳ ನಿರ್ವಹಣೆ (ಮಷಿನ್ ಟ್ಯಾಂಪಿಂಗ್) ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ವಿಜಯಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು 17 ದಿನಗಳವರೆಗೆ ಭಾಗಶಃ ರದ್ದುಗೊಳಿಸಲಾಗುತ್ತದೆ.

ಜೂನ್ 8 ರಿಂದ 24 ರವರೆಗೆ ವಿಜಯಪುರ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಜಂಕ್ಷನ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಹಾಸನ ಮತ್ತು ಮಂಗಳೂರು ಜಂಕ್ಷನ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಹಾಸನದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಜೂನ್ 9 ರಿಂದ ಜೂನ್ 25 ರವರೆಗೆ ಮಂಗಳೂರು ಜಂಕ್ಷನ್ ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲ್ ಓಡಾಟವನ್ನು ಮಂಗಳೂರು ಜಂಕ್ಷನ್ ಮತ್ತು ಹಾಸನ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಸಂಚಾರ ನಿಗದಿತ ಸಮಯದಲ್ಲಿ ಹಾಸನದಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟನೆಯಲ್ಲಿ  ತಿಳಿಸಿದ್ದಾರೆ. 

Similar News