×
Ad

ದೇಶದ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ವದ್ದು: ಅಗರ್ವಾಲ್

Update: 2023-06-07 19:32 IST

ಉಡುಪಿ, ಜೂ.7: ಭಾರತ ದೇಶದ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಗಿದೆ. ದೇಶದಲ್ಲಿ ಹೊಸ ದಾಗಿ ಸಿಎ ಪಾಸ್, ಯುವ ಲೆಕ್ಕಪರಿ ಶೋಧಕರ ಅವ್ಯಶಕತೆ ಇದ್ದು ಈ ನಿಟ್ಟಿನಲ್ಲಿ ಕಾರ್ಯ ರೂಪಿಸಬೇಕು ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಎ.ರಂಜಿತ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.

ಉಡುಪಿ ಕುಂಜಿಬೆಟ್ಟು ಸಿಎ ಭವನಕ್ಕೆ ಮಂಗಳವಾರ ಭೇಟಿ ನೀಡಿ  ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ರಂಜಿತ್ ಕುಮಾರ್ ಅಗರ್ವಾಲ್ ಗೌರವಿಸಲಾಯಿತು.

ಸಿಎ ಕೋತಾ ಎಸ್.ಶ್ರೀನಿವಾಸ್, ಸಿಎ ಪ್ರಸನ್ನ ಕುಮಾರ್, ಸಿಎ ಮಂಗೇಶ್ ಕಿನಾರೆ, ಸಿಎ ಗೀತಾ ಎ.ಬಿ. ಹಾಗೂ ಉಡುಪಿ ಸಿ.ಎ. ಸಂಸ್ಥೆಯ ಅಧ್ಯಕ್ಷ ಸಿ.ಎ.ಮಹೇಂದ್ರ, ಸ್ಥಾಪಕ ಅಧ್ಯಕ್ಷ ಸಿ.ಎ. ಗುಜ್ಜಾಡಿ ಪ್ರಭಾಕರ ನಾಯಕ್, ಸಿಎ  ಲೋಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Similar News