ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ

Update: 2023-06-07 14:04 GMT

ಉಡುಪಿ, ಜೂ.7: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ  ಸಿಂಗಲ್ ಯೂಸ್ ಪ್ಲಾಸ್ಟಿಕ್ ಮುಕ್ತ ನಗರ ಪರಿಕಲ್ಪನೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಡಯಾನಾ ಬಿಸಿಎಂ ವಿದ್ಯಾರ್ಥಿ ವಸತಿ ಎಬಿವಿಪಿ ಘಟಕ ಮತ್ತು ಎಸ್ಸಿಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ಮಂಚಿಕೆರೆ ಬಿಸಿಎಂ ವಿದ್ಯಾರ್ಥಿ ವಸತಿ ಎಬಿವಿಪಿ ಘಟಕದ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಯಾನಾ ಮತ್ತು ಮಂಚಿಕೇರೆ ಪ್ರದೇಶದ ಬೀದಿಗಳನ್ನು ಸ್ವಚ್ಚಗೊಳಿಸಿ, ಬಸ್ಸು ತಂಗುದಾಣ ಮತ್ತು ರಿಕ್ಷಾ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಿ ನಂತರ ವಾರದ ಸಂತೆಯಲ್ಲಿ ಸೇರಿದ ಗ್ರಾಹಕ ಮತ್ತು ವ್ಯಾಪರಿಗಳಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿ ಕೊನೆಯಲ್ಲಿ ಹಾಸ್ಟೆಲಿನ ಅಂಗಳದಲ್ಲಿ ಒಂದು ಸಸಿ ನೆಡುವುದರೊಂದಿಗೆ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಶ್ರೀಹರಿ, ನಗರ ಕಾರ್ಯದರ್ಶಿ ಗಣೇಶ್ ಪೂಜಾರಿ, ಹಾಸ್ಟೆಲ್ ಪ್ರಮುಖ್ ನವೀನ್ ಭಟ್ಕಳ ಹಾಗೂ ಹಾಸ್ಟೆಲ್ ನಿರ್ವಾಹಕ ಬಸವರಾಜ್ ಮತ್ತು ಸಿಬ್ಬಂದಿ ಪ್ರತಾಪ್ ಮತ್ತು ಪರಿಷತ್‌ನ ಕಾರ್ಯಕರ್ತರು ಹಾಜರಿದ್ದರು.

Similar News