ಜುಲೈ 10ರವರೆಗೆ ಸತ್ಯ ಶೋಧಕ ಘಟಕದ ಕುರಿತು ಅಧಿಸೂಚನೆ ಹೊರಡಿಸುವುದಿಲ್ಲ: ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ

Update: 2023-06-07 17:29 GMT

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ಸರಕಾರದ ವಿರುದ್ಧದ ಸುಳ್ಳು ಸುದ್ದಿಗಳನ್ನು ಗುರುತಿಸಲು ಸತ್ಯ ಶೋಧಕ ಘಟಕ ಆರಂಭಿಸುವ ಕುರಿತು ಜೂನ್ 10ರ ವರೆಗೆ ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಕೇಂದ್ರ ಸರಕಾರ ಬುಧವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ‌

ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸ್ಟಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿ ಕೇಂದ್ರ ಇಲೆಕ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿದ ಅಫಿಡಾವಿಟ್ ನಲ್ಲಿ, ಯಾವ ಅಂಶ ಸತ್ಯ ಹಾಗೂ ಯಾವ ಅಂಶ ಸುಳ್ಳು ಎಂಬುದಕ್ಕೆ ನ್ಯಾಯಾಲಯ ಅಂತಿಮ ತೀರ್ಪುಗಾರನಾಗರಲಿದೆ ಎಂದಿದೆ.

ಸರಕಾರ ಈ ನಿಯಮಗಳನ್ನು ಸಮರ್ಥಿಸಿಕೊಂಡರೆ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಅಸೋಸಿಯೇಶನ್ ಆಫ್ ಇಂಡಿಯನ್ ಮ್ಯಾಗಝಿನ್ಗಳು ಈ ನಿಯಮಗಳು ಸಂವಿಧಾನಬಾಹಿರ ಹಾಗೂ ನಿರಂಕುಶ ಎಂಬ ನೆಲೆಯಲ್ಲಿ ಪ್ರಶ್ನಿಸಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ವಿಷಯಗಳನ್ನು ಪೋಸ್ಟ್ ಮಾಡುವವರ ಮಾತ್ರವಲ್ಲ, ಪೋಸ್ಟ್ ಗಳನ್ನು ಓದುವವರ ಹಕ್ಕುಗಳನ್ನು ರಕ್ಷಿಸುವ ಬಾಧ್ಯತೆಯನ್ನು ಕೂಡ ಸರಕಾರ ಹೊಂದಿದೆ ಎಂದು ಅಫಿಡಾವಿಟ್ ಹೇಳಿದೆ.

Similar News