ಫುಟ್‌ಪಾತ್‌ಗಳಲ್ಲಿರುವ ಅಂಗಡಿ ಬೋರ್ಡ್‌ಗಳ ತೆರವಿಗೆ ಸೂಚನೆ

Update: 2023-06-08 14:27 GMT

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ಉದ್ದಿಮೆದಾರರು ತಮ್ಮ ಅಂಗಡಿಗಳ ಬೋರ್ಡುಗಳನ್ನು ಪಾದಾಚಾರಿ ಮಾರ್ಗ/ ಫುಟ್‌ಪಾತ್‌ಗಳಲ್ಲಿ ಅಳವಡಿಸಬಾರದು ಎಂದು ನಗರಸಭೆ ಸೂಚನೆ ನೀಡಿದೆ.

ಫುಟ್‌ಪಾತ್‌ಗಳಲ್ಲಿ ಅಂಗಡಿಗಳ ಬೋರ್ಡುಗಳನ್ನು ಅಳವಡಿಸಿರುವುದು ಕಂಡುಬಂದಲ್ಲಿ, ನಗರಸಭೆಯ ವತಿಯಿಂದ ಯಾವುದೇ ಮುನ್ಸೂಚನೆ ನೀಡದೇ ಅಂತಹ ಬೋರ್ಡುಗಳನ್ನು ತೆರವು ಗೊಳಿಸಿ, ಭಾರೀ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

Similar News