ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಆಸ್ಟ್ರೇಲಿಯ ವಿರುದ್ಧ ಭಾರತ 296 ರನ್‌ಗೆ ಆಲೌಟ್

ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ ಅರ್ಧಶತಕ

Update: 2023-06-09 13:17 GMT

ದಿ ಓವಲ್: ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ(89 ರನ್, 129 ಎಸೆತ) ಹಾಗೂ ಬಾಲಂಗೋಚಿ ಶಾರ್ದೂಲ್ ಠಾಕೂರ್(51 ರನ್,109 ಎಸೆತ) ಅರ್ಧಶತಕದ ಕೊಡುಗೆಯ ಹೊರತಾಗಿಯೂ ನಾಯಕ ಪ್ಯಾಟ್ ಕಮಿನ್ಸ್ (3-83)ನೇತೃತ್ವದಲ್ಲಿ ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿದ ಆಸ್ಟ್ರೇಲಿಯ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 296 ರನ್‌ಗೆ ನಿಯಂತ್ರಿಸಿದೆ.

ಮೂರನೇ ದಿನದಾಟವಾದ ಶುಕ್ರವಾರ 5 ವಿಕೆಟ್ ನಷ್ಟಕ್ಕೆ 151 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 69.4 ಓವರ್‌ಗಳಲ್ಲಿ 296 ರನ್‌ಗೆ ಆಲೌಟಾಯಿತು. 

  ಶ್ರೀಕಾಂತ್ ಭರತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಭಾರತ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದ್ದಾಗ ಒಂದಾದ ರಹಾನೆ ಹಾಗೂ ಠಾಕೂರ್ 7ನೇ ವಿಕೆಟ್‌ಗೆ 109 ರನ್ ಜೊತೆಯಾಟದಲ್ಲಿ ಭಾಗಿಯಾದರು. ಇದು ಭಾರತದ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.

ಆಸ್ಟ್ರೇಲಿಯದ ಪರ ಕಮಿನ್ಸ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕ್ಯಾಮರೂನ್ ಗ್ರೀನ್(2-44), ಬೋಲ್ಯಾಂಡ್(2-59) ಹಾಗೂ ಮಿಚೆಲ್ ಸ್ಟಾರ್ಕ್(2-71) ತಲಾ ಎರಡುವಿಕೆಟ್‌ಗಳನ್ನು ಪಡೆದರು.

Similar News