×
Ad

ಬಸ್ ಚಾಲಕ ಆತ್ಮಹತ್ಯೆ

Update: 2023-06-11 21:42 IST

ಪಡುಬಿದ್ರಿ, ಜ.11: ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿ ಬಸ್ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಚ್ಚಿಲ ಪೊಲ್ಯ ಎಂಬಲ್ಲಿ ಜೂ.10ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಪೊಲ್ಯ ನಿವಾಸಿ ಅವಿನಾಶ್ (44) ಎಂದು ಗುರುತಿಸಲಾಗಿದೆ.

ಖಾಸಗಿ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕ ಕೆಲಸ ಮಾಡಿಕೊಂಡಿದ್ದ ಇವರು, ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದರು. ರಾತ್ರಿ ವಿಪರೀತ ಮದ್ಯಪಾನ ಮಾಡಿಕೊಂಡು ಮನೆಗ ಬಂದು ಊಟ ಮಾಡಿ ಪತ್ನಿ ಮಕ್ಕಳೊಂದಿಗೆ ಜಗಳವಾಡಿದ ಅವಿನಾಶ್, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹಾಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ  ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News