ಆ್ಯಶಸ್ ಸರಣಿ: ಆನ್ ಫೀಲ್ಡ್ ಅಂಪೈರ್ ಆಗಿ ಭಾರತದ ನಿತಿನ್ ಮೆನನ್ ಆಯ್ಕೆ
Update: 2023-06-12 23:12 IST
ಮುಂಬೈ: ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲಿ ನಿತಿನ್ ಮೆನನ್ ಕಾರ್ಯನಿರ್ವಹಿಸಲಿದ್ದಾರೆ. ಮೆನನ್ ಅವರು ಐಸಿಸಿ ಅಂಪೈರ್‌ಗಳ ಇಲೈಟ್ ಪ್ಯಾನೆಲ್‌ನಲ್ಲಿರುವ ಏಕೈಕ ಭಾರತೀಯನಾಗಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವೆ ನಡೆಯುವ ಐಕಾನಿಕ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂದೋರ್‌ನ 39ರ ಹರೆಯದ ಮೆನನ್ ಆನ್ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 3ನೇ ಪಂದ್ಯವು ಲೀಡ್ಸ್‌ನಹೆಡ್ಡಿಂಗ್ಲೆಯಲ್ಲಿ ಜುಲೈ 6ರಿಂದ 10ರ ತನಕ ನಡೆಯಲಿದೆ.
ಮೆನನ್ ಅವರಿಗೆ ಲೀಡ್ಸ್ ನಲ್ಲಿ ಆನ್ ಫೀಲ್ಡ್ ಜೊತೆಗಾರನಾಗಿ ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ಕುಮಾರ ಧರ್ಮಸೇನ ಸಾಥ್ ನೀಡಲಿದ್ದಾರೆ.
2020ರಲ್ಲಿ ಮೆನನ್ ಅವರನ್ನು ಇಲೈಟ್ ಪ್ಯಾನೆಲ್‌ಗೆ ಸೇರಿಸಲಾಗಿತ್ತು.