×
Ad

ನಿತೀಶ್ ಕುಮಾರ್ ಸಂಪುಟಕ್ಕೆ ಸಂತೋಷ್ ಕುಮಾರ್ ಸುಮನ್ ರಾಜೀನಾಮೆ

Update: 2023-06-13 14:04 IST

ಪಾಟ್ನಾ: ಬಿಹಾರದ ಎಸ್‌ಸಿ/ಎಸ್‌ಟಿ ಕಲ್ಯಾಣ ಇಲಾಖೆ ಸಚಿವ ಸಂತೋಷ್ ಕುಮಾರ್ ಸುಮನ್ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿದರು.

ಜನತಾ ದಳ (ಸಂಯುಕ್ತ) ದೊಂದಿಗೆ ನನ್ನ ಪಕ್ಷವನ್ನು ವಿಲೀನಗೊಳಿಸಲು ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ ಕುಮಾರ್, ನಮ್ಮ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದ್ದು, ಅದನ್ನು ರಕ್ಷಿಸಲು ಈ ರೀತಿ ಮಾಡಿದ್ದೇನೆ ಎಂದರು.

"ನಮ್ಮನ್ನು ಆಹ್ವಾನಿಸದಿದ್ದಾಗ, ನಮ್ಮನ್ನು ಪಕ್ಷವಾಗಿ ಗುರುತಿಸದಿದ್ದಾಗ, ನಮ್ಮನ್ನು ಹೇಗೆ ಆಹ್ವಾನಿಸಲಾಗುತ್ತದೆ?"  ಎಂದು ಜೂನ್ 23 ರಂದು ಪಾಟ್ನಾದಲ್ಲಿ ನಡೆಯಲಿರುವ  ವಿರೋಧ ಪಕ್ಷದ ಬೃಹತ್ ಸಭೆಯಲ್ಲಿ ಕುಮಾರ್  ಅವರ ಪಕ್ಷ ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಭಾಗವಹಿಸುತ್ತದೆಯೇ ಎಂದು ಕೇಳಿದಾಗ ಉತ್ತರಿಸಿದರು.

"ನಮ್ಮದು  ಸ್ವತಂತ್ರ ಪಕ್ಷ, ನಮ್ಮ ಅಸ್ತಿತ್ವವನ್ನು ರಕ್ಷಿಸುವ ಬಗ್ಗೆ ನಾವು ಯೋಚಿಸುತ್ತೇವೆ. ನಾನು ಈಗ ಈ ಬಗ್ಗೆ ಯೋಚಿಸುತ್ತಿಲ್ಲ, ನಾನು ಇನ್ನೂ ಮಹಾಘಟಬಂಧನ್‌ನ ಭಾಗವಾಗಲು ಬಯಸುತ್ತೇನೆ’’ ಎಂದು ನೀವು ಎನ್‌ಡಿಎ ಸೇರುತ್ತೀರಾ ಎಂದು ಕೇಳಿದಾಗ ಎಚ್‌ಎಎಂ ನಾಯಕ ಪ್ರತಿಕ್ರಿಯಿಸಿದರು.

ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಪುತ್ರ   ಸುಮನ್ ಅವರು ರಾಜ್ಯ ಸರಕಾರದಲ್ಲಿ ಎಸ್‌ಸಿ/ಎಸ್‌ಟಿ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ. ಅವರ ಪಕ್ಷವು ಆಡಳಿತಾರೂಢ ಜೆಡಿಯು ಹಾಗೂ  ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮಿತ್ರಪಕ್ಷವಾಗಿದೆ.

HAM ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿ ಉಳಿಯಲಿದೆ ಎಂದು ಸಂತೋಷ್ ಕುಮಾರ್ ಸುಮನ್ ಸ್ಪಷ್ಟಪಡಿಸಿದ್ದಾರೆ.

Similar News