×
Ad

ದಲಿತರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ

Update: 2023-06-13 20:22 IST

ಉಡುಪಿ, ಜೂ.13: ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಬ್ರಹ್ಮಣ್ಯ ನಗರ ವಾರ್ಡಿನ ದಲಿತ ಸಮುದಾಯದ ಶಾಂತ ಮತ್ತು ಸುಮಿತ್ರ ಅವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಯಿತು.

ಟ್ರಸ್ಟ್ ವತಿಯಿಂದ ಈವರೆಗೆ ಉಡುಪಿ ನಗರದ 10ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ. ದಾನಿಗಳಾದ ಉಡುಪಿ ಮೂಲದ ಗೋವಾದ ಉದ್ಯಮಿ ಹರೀಶ ಕಲ್ಕೂರ ಮತ್ತು ಸುಮಾ ಹರೀಶ್ ಕಲ್ಕೂರ ಉಚಿತ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿ ಮನೆಯವರಿಗೆ ಪಾತ್ರೆ ಬಟ್ಟೆಗಳನ್ನು ನೀಡಿದರು.

ಈ ಸಂದರ್ಭ ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಮಾಜಿ ನಗರಸಭಾ ಸದಸ್ಯೆ ಸುಬೇದ, ಆಸರೆ ಟ್ರಸ್ಟಿನ ಸದಸ್ಯರಾದ ವಿದ್ಯಾಶಾಮ್ ಸುಂದರ್, ಶ್ರೀನಿವಾಸ್ ರಾವ್, ರಾಜಾರಾಮ್, ಸುರೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Similar News