×
Ad

ಜೂ.15ರಂದು ಪಿಪಿಸಿಯಲ್ಲಿ ವಿದ್ಯಾರ್ಥಿ-ವಿಜ್ಞಾನಿ ಸಂವಾದ

Update: 2023-06-13 21:19 IST

ಉಡುಪಿ, ಜೂ.13: ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳ ನಡುವಿನ ಸಂವಾದ ಕಾರ್ಯಕ್ರಮವೊಂದು ಜೂ.15 ರಂದು ಬೆಳಗ್ಗೆ 9:30ರಿಂದ ಅಪರಾಹ್ನ 12:30ರವರೆಗೆ ನಗರದ ಪೂರ್ಣಪ್ರಜ್ಞ ಕಾಲೇಜಿನ  ವಿಜ್ಞಾನ ಸಂಘದ ವತಿಯಿಂದ ಆಯೋಜನೆಗೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ. ತಿಳಿಸಿದ್ದಾರೆ.

ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 600ಕ್ಕೂ ಅಧಿಕ ವಿಜ್ಞಾನ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲ ಸೆಂಟರ್ ಫ್ ನ್ಯಾಚುರಲ್ ಸಾಯನ್ಸ್‌ನ ನಿರ್ದೇಶಕ ಡಾ.ಪಿ.ಶ್ರೀಕುಮಾರ್, ಅಮೆರಿಕದ ಅಸಬಾಮ ವಿವಿಯ ಪೆಥಾಲಜಿ ವಿಭಾಗದ ಪ್ರೊ.(ಡಾ.) ಸೂರ್ಯನರಾಯಣ ವಾರಂಬಳ್ಳಿ ಹಾಗೂ ಬೆಂಗಳೂರು ಕ್ರೈಸ್ಟ್ ಕಾಲೇಜಿನ ಮೆಟಿರಿಯಲ್ ಸಾಯನ್ಸ್‌ನ ಡಾ.ಗುರುಮೂರ್ತಿ ಹೆಗ್ಡೆ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಡಾ.ರಾಘವೇಂದ್ರ ತಿಳಿಸಿದರು.

Similar News