×
Ad

ಒಂದೇ ಎಸೆತದಲ್ಲಿ ಹರಿದು ಬಂತು 18 ರನ್!

ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಇತಿಹಾಸ ನಿರ್ಮಾಣ

Update: 2023-06-14 12:42 IST

ಚೆನ್ನೈ: ಚೆಪಾಕ್ ಸೂಪರ್ ಗಿಲ್ಲಿಸ್ ಹಾಗೂ  ಸೇಲಂ ಸ್ಪಾರ್ಟನ್ಸ್ ನಡುವಿನ ತಮಿಳುನಾಡು ಪ್ರೀಮಿಯರ್ ಲೀಗ್  ಪಂದ್ಯದಲ್ಲಿ ಇತಿಹಾಸ ನಿರ್ಮಾಣವಾಗಿದೆ.

ಇನಿಂಗ್ಸ್‌ನ 20ನೇ ಓವರ್‌ನ ಕೊನೆಯ ಎಸೆತದಲ್ಲಿ  ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ ಅವರು 18 ರನ್‌ಗಳನ್ನು ಬಿಟ್ಟುಕೊಟ್ಟರು. TNPL 2022 ಋತುವಿನಲ್ಲಿ ತನ್ವರ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಸೂಪರ್ ಗಿಲ್ಲಿಸ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಲಯವನ್ನು ಕಂಡುಕೊಳ್ಳಲು ಹೆಣಗಾಡಿದರು.ಕೊನೆಯ ಎಸೆತದಲ್ಲಿ   18 ರನ್‌ ಸೋರಿಕೆ ಮಾಡಿದ  ಪರಿಣಾಮವಾಗಿ ಎದುರಾಳಿ ತಂಡ ಗಿಲ್ಲಿಸ್ ಕೊನೆಯ ಓವರ್‌ನಲ್ಲಿ 26 ರನ್ ಗಳಿಸುವ ಮೂಲಕ   5 ವಿಕೆಟ್ ನಷ್ಟಕ್ಕೆ 217 ಮೊತ್ತವನ್ನು ಹಾಕಿತು. ಇದಕ್ಕೆ ಉತ್ತರವಾಗಿ ಸೇಲಂ ತಂಡ 9 ವಿಕೆಟಿಗೆ 165 ರನ್ ಗಳಿಸಿ 52 ರನ್ ನಿಂದ ಸೋಲುಂಡಿತು.

"ಕೊನೆಯ ಓವರ್‌ನ ಹೊಣೆಯನ್ನು ನಾನು ತೆಗೆದುಕೊಳ್ಳಬೇಕಾಗಿದೆ. ಹಿರಿಯ ಬೌಲರ್ ಆಗಿ   ನಾಲ್ಕು ನೋ-ಬಾಲ್‌ಗಳನ್ನು ಎಸೆದಿರುವುದಕ್ಕೆ ಬೇಸರವಾಗಿದೆ.  ನನ್ನ ಈ ಕಳಪೆ ಬೌಲಿಂಗ್ ಗೆ ಗಾಳಿ ಕಾರಣ" ಎಂದು ಸೇಲಂ ಸ್ಪಾರ್ಟನ್ಸ್ ನಾಯಕ ತನ್ವರ್ ಪಂದ್ಯದ ನಂತರ ಹೇಳಿದರು.

ಒಂದೇ ಚೆಂಡಿನಲ್ಲಿ 18 ರನ್ ಹರಿದುಬಂದಿದ್ದು ಹೀಗೆ…

- 19.5 ನೇ ಓವರ್ ನಲ್ಲಿ  ತನ್ವರ್ ಎಸೆತಕ್ಕೆ  ಬ್ಯಾಟರ್ ಬೌಲ್ಡ್ ಆಗಿದ್ದರೂ ಅದು ನೋ-ಬಾಲ್  ಆಗಿತ್ತು.

- ಮುಂದಿನ ಎಸೆತವೂ  ಮತ್ತೊಂದು ನೋ-ಬಾಲ್‌ ಆಗಿದ್ದು, ಅದು  ಸಿಕ್ಸರ್‌ ಗಡಿ ದಾಟಿತು. ಆಗ ಒಟ್ಟು  ರನ್‌ 8.

- ಮುಂದಿನ ಎಸೆತವೂ ನೋ-ಬಾಲ್ ಆಗಿತ್ತು. ಆಗ  ಬ್ಯಾಟರ್‌ಗಳು 2 ರನ್ ಗಳಿಸಿದರು, ಒಟ್ಟು ರನ್ 11ಕ್ಕೇರಿತು.

- ಮುಂದಿನ ಚೆಂಡು ವೈಡ್  ಆಗಿ ಕೊನೆಗೊಂಡಿತು, ಒಟ್ಟು ಮೊತ್ತ 12 ರನ್‌ಗಳಿಗೆ ತಲುಪಿತು.

- ಕೊನೆಯ ಎಸೆತ, ಈ ಬಾರಿ ಸರಿಯಾಗಿತ್ತು. ಆದರೆ ಆ ಚೆಂಡು ಸಿಕ್ಸರ್ ಗೆ ಸಿಡಿಯಿತು  ಒಟ್ಟಾರೆ ಒಂದೇ ಎಸೆತದಲ್ಲಿ  18 ರನ್‌ ಹರಿದುಬಂತು.

Similar News