×
Ad

ಮೆಸ್ಕಾಂ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ

Update: 2023-06-15 21:13 IST

ಅಜೆಕಾರು, ಜೂ.15: ಮೆಸ್ಕಾಂ ಇಲಾಖೆಯ ಗುತ್ತಿಗೆ ನೌಕರರೊಬ್ಬರು ಖಾಯಂ ಆಗದ ಬಗ್ಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.14ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಸಂದೀಪ ಶೆಟ್ಟಿ(30) ಎಂದು ಗುರುತಿಸಲಾಗಿದೆ. ಕಾರ್ಕಳದ ಮೆಸ್ಕಾಂ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಿಕೊಂಡಿದ್ದ ಇವರ, ಕೆಲಸ ಖಾಯಂ ಆಗಿರುವುದಿಲ್ಲ. ಇದೇ ವಿಚಾರದಲ್ಲಿ ಮನನೊಂದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಜಾರ್ಕಳ ಮುಂಡ್ಲಿ ಗ್ರಾಮದ ಕಾಂತ ಬೆಟ್ಟು ಎಂಬಲ್ಲಿರುವ ತಂಗಿಯ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News