×
Ad

ಇಂಡೋನೇಶ್ಯ ಓಪನ್‌: ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿದ ಪ್ರಣಯ್

Update: 2023-06-17 23:38 IST

ಜಕಾರ್ತ: ಇಂಡೋನೇಶ್ಯ ಓಪನ್‌ನ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಭಾರತದ ಆಟಗಾರ ಎಚ್.ಎಸ್. ಪ್ರಣಯ್ ಸೋಲುಂಡಿದ್ದಾರೆ.

ಶನಿವಾರ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಅಗ್ರ ಶ್ರೇಯಾಂಕದ ವಿಕ್ಟರ್ ಅಕ್ಸೆಲ್‌ಸೆನ್ ವಿರುದ್ಧ 15-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಇದರೊಂದಿಗೆ ಫೈನಲ್ ತಲುಪುವ ಉತ್ತಮ ಅವಕಾಶವನ್ನು ಕಳೆದುಕೊಂಡರು.

ಪ್ರಣಯ್ ತೀವ್ರ ಪ್ರಯತ್ನ ಪಟ್ಟರೂ ಬಲಿಷ್ಠ ಎದುರಾಳಿಯ ಪ್ರಾಬಲ್ಯ ಮುರಿಯಲು ವಿಫಲರಾಗಿದ್ದು, ಟೂರ್ನಮೆಂಟ್‌ನಿಂದ ನಿರ್ಗಮಿಸಿದರು.

ಪ್ರಣಯ್ ಡೆನ್ಮಾರ್ಕ್ ಆಟಗಾರನ ವಿರುದ್ಧ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರನೇ ಸೋಲು ಕಂಡರು. ಕೇವಲ ಎರಡು ಬಾರಿ ಮಾತ್ರ ಅಕ್ಸೆಲ್‌ಸನ್ ವಿರುದ್ಧ ಜಯ ಸಾಧಿಸಿದ್ದಾರೆ.

Similar News