×
Ad

ಆಸ್ಟ್ರೇಲಿಯ ಗೆಲುವಿಗೆ 281 ರನ್ ಗುರಿ ನೀಡಿದ ಇಂಗ್ಲೆಂಡ್

ಮೊದಲ ಟೆಸ್ಟ್: ಕಮಿನ್ಸ್, ಲಿಯೊನ್‌ಗೆ ತಲಾ 4 ವಿಕೆಟ್

Update: 2023-06-19 23:40 IST

ಬರ್ಮಿಂಗ್‌ಹ್ಯಾಮ್: ಜೋ ರೂಟ್(46 ರನ್, 55 ಎಸೆತ), ಹ್ಯಾರಿ ಬ್ರೂಕ್(46 ರನ್, 52 ಎಸೆತ), ಬೆನ್ ಸ್ಟೋಕ್ಸ್(43 ರನ್, 66 ಎಸೆತ)ಸಂಘಟಿತ ಪ್ರಯತ್ನದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ತಂಡಕ್ಕೆ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 281 ರನ್ ಗುರಿ ನೀಡಿದೆ.

ದ್ವಿತೀಯ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್‌ನಿಂದ 4ನೇ ದಿನದಾಟವನ್ನು ಮುಂದುವರಿಸಿದ ಇಂಗ್ಲೆಂಡ್ ಟೀ ವಿರಾಮದ ವೇಳೆಗೆ 66.2 ಓವರ್‌ಗಳಲ್ಲಿ 273 ರನ್‌ಗೆ ಆಲೌಟಾಯಿತು. ಒಲಿ ಪೋಪ್(14ರನ್) ಜೊತೆ 3ನೇ ವಿಕೆಟ್‌ಗೆ 50 ರನ್ ಹಾಗೂ ಬ್ರೂಕ್ ಜೊತೆ 4ನೇ ವಿಕೆಟ್‌ಗೆ 52 ರನ್ ಸೇರಿಸಿದ ರೂಟ್ ಇಂಗ್ಲೆಂಡ್ ಇನಿಂಗ್ಸ್‌ಗೆ ಆಸರೆಯಾದರು.

 ಆಸ್ಟ್ರೇಲಿಯದ ಪರ ನಾಯಕ ಪ್ಯಾಟ್ ಕಮಿನ್ಸ್(4-63) ಹಾಗೂ ಸ್ಪಿನ್ನರ್ ನಥಾನ್ ಲಿಯೊನ್(4-80)ತಲಾ 4 ವಿಕೆಟ್‌ಗಳನ್ನು ಕಬಳಿಸಿ ಆಂಗ್ಲರನ್ನು 273ಕ್ಕೆ ನಿಯಂತ್ರಿಸಿದರು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 8ಕ್ಕೆ 393 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯವು 386 ರನ್‌ಗೆ ಆಲೌಟಾಗಿ ಇಂಗ್ಲೆಂಡ್‌ಗೆ 7 ರನ್ ಮುನ್ನಡೆ ಬಿಟ್ಟುಕೊಟ್ಟಿತು. 

Similar News