ಪಾಟ್ನಾದಲ್ಲಿ ನಾಳೆ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸದೇ ಇರಲು ಮಾಯಾವತಿ ನಿರ್ಧಾರ
ಹೊಸದಿಲ್ಲಿ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬಹುನಿರೀಕ್ಷಿತ ವಿಪಕ್ಷಗಳ ಒಗ್ಗಟ್ಟಿನ ಬಲ ಪ್ರದರ್ಶನಕ್ಕೆ ಇನ್ನೇನು ಒಂದು ದಿನ ಇದೆ ಎನ್ನುವಾಗ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ತಾವು ಈ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ್ದಾರೆ.
ವಿಪಕ್ಷಗಳು 2024 ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿವಿಧ ವಿಷಯಗಳನ್ನು ಜೊತೆಯಾಗಿ ಎತ್ತುತ್ತಿವೆ, ಆದರೆ ಪಾಟ್ನಾದಲ್ಲಿ ನಿತೀಶ್ ಕುಮಾರ್ ಆಯೋಜಿಸಿರುವ ಸಭೆಯು ಕೈಗಳನ್ನು ಜೋಡಿಸಿದಂತೆಯೇ ಹೊರತು ಹೃದಯಗಳನ್ನಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ಇದನ್ನೂ ಓದಿ: ಯತ್ನಾಳ್’ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ
“ಹಣದುಬ್ಬರ, ಬಡತನ, ನಿರುದ್ಯೋಗ, ಹಿಂದುಳಿಯುವಕೆ, ಅನಕ್ಷರತೆ, ಜನಾಂಗೀಯ ದ್ವೇಷ, ಧಾರ್ಮಿಕ ಹಿಂಸಾಚಾರ ಇತ್ಯಾದಿಗಳಿಂದ ನರಳುತ್ತಿರುವ ದೇಶದಲ್ಲಿ ಬಹುಜನರ ಪರಿಸ್ಥಿತಿ ಗಮನಿಸಿದಾಗ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ಪಕ್ಷಗಳು ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದ ಆಶಯದಂತೆ ಸಮಾನತೆಯನ್ನು ತರಲು ಅಸಮರ್ಥರು,” ಎಂದು ಮಾಯಾವತಿ ಹೇಳಿದ್ದಾರೆ.
“ಇಂತಹ ಯಾವುದೇ ಸಭೆಗಿಂತ ಮುಂಚಿತವಾಗಿ, ಈ ಪಕ್ಷಗಳು, ಜನರು ಅವುಗಳ ಮೇಲಿಟ್ಟಿರುವ ವಿಶ್ವಾಸವನ್ನು ಸಮರ್ಥಿಸಲು ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುವುದು ಒಳ್ಳೆಯದು. ಎಷ್ಟು ಸಮಯ “ಮುಹ್ ಮೇ ರಾಮ್, ಬಗಲ್ ಮೆ ಚ್ಚುರಿ ನಡೆಯತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನಾಳೆಯ ಸಭೆಯ ಆಹ್ವಾನಿತರ ಪೈಕಿ ಮಾಯಾವತಿ ಕೂಡ ಸೇರಿದ್ದಾರೆಂದು ತಿಳಿಯಲಾಗಿತ್ತಾದರೂ ಈ ಕುರಿತು ಆಕೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ ಹಾಗೂ ಆಕೆ ಕಾಂಗ್ರೆಸ್ ಜೊತೆಗೆ ವೇದಿಕೆ ಹಂಚಿಕೊಳ್ಳಲು ಸಿದ್ಧರಿದ್ದಾರೆಯೇ ಎಂಬ ಕುರಿತೂ ಸ್ಪಷ್ಟತೆಯಿರಲಿಲ್ಲ.
ಗರಿಷ್ಠ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಹಾಗೂ ಯಾವುದೇ ಪಕ್ಷ ಅಥವಾ ಮೈತ್ರಿಯ ವಿಜಯಕ್ಕೆ ಪ್ರಮುಖ ಕೊಡುಗೆ ನೀಡುವ ರಾಜ್ಯವಾದ ಉತ್ತರ ಪ್ರದೇಶದ ನಾಯಕರಿಗೆ ಹೆಚ್ಚಿನ ಮಹತ್ವ ನೀಡದೇ ಇರುವ ಕುರಿತು ತಮಗೆ ಅಸಮಾಧಾನವಿದೆ ಎಂದು ಮಾಯಾವತಿ ತಮ್ಮ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ.
1.महंगाई, गरीबी, बेरोजगारी, पिछड़ापन, अशिक्षा, जातीय द्वेष, धार्मिक उन्माद/हिंसा आदि से ग्रस्त देश में बहुजन के त्रस्त हालात से स्पष्ट है कि परमपूज्य बाबा साहेब भीमराव अम्बेडकर के मानवतावादी समतामूलक संविधान को सही से लागू करने की क्षमता कांग्रेस, बीजेपी जैसी पार्टियों के पास नही
— Mayawati (@Mayawati) June 22, 2023