ನಂದಿಬೆಟ್ಟುವಿನಲ್ಲಿ ಚರಂಡಿ ಸಮಸ್ಯೆ: ಮನೆಯಂಗಳದಲ್ಲಿ ನೀರು!
Update: 2023-06-22 15:37 IST
ಕುಂದಾಪುರ, ಜೂ.22: ಇಲ್ಲಿನ ಪುರಸಭೆ ವ್ಯಾಪ್ತಿಯ ಬಿಎಚ್‌ಎಂ ರಸ್ತೆ ನಂದಿಬೆಟ್ಟು ನಿವಾಸಿ ಜಲಜಾ ಪೂಜಾರಿ ಎಂಬವರ ಮನೆಗೆ ನೀರು ಹೋಗುವಲ್ಲಿ ಸೂಕ್ತ ಚರಂಡಿ ಇಲ್ಲದೆ ಮನೆ ಅಂಗಳವಿಡೀ ನೀರು ತುಂಬಿದೆ. ಮನೆ ಸುತ್ತಲೂ ಗದ್ದೆಗಳ ಮಣ್ಣು ತುಂಬಿಸಿ ನೀರು ಹೋಗುವ ಜಾಗವನ್ನು ಬಂದ್ ಮಾಡಿದ್ದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರಿಗೆ ಇದರಿಂದ ತುಂಬಾ ತೊಂದರೆ ಯಾಗುತ್ತಿದ್ದು ಈ ಬಗ್ಗೆ ಕಳೆದ ವರ್ಷ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯೂ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಜಾಗವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ತಕ್ಷಣವೇ ಚರಂಡಿ ಸುವ್ಯವಸ್ಥೆ ಮಾಡಬೇಕು ಹಾಗೂ ಹೊಂಡದ ಜಾಗಕ್ಕೆ ಮಣ್ಣನ್ನು ತುಂಬಿಸಿ ಸಾರ್ವಜನಿಕರಿಗೆ ನಡೆಯಲು ಅನುಕೂಲ ಮಾಡಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.