×
Ad

ವಿಪಕ್ಷಗಳ ಬೃಹತ್‌ ಸಭೆ: ಪಾಟ್ನಾ ತಲುಪಿದ ಮಮತಾ ಬ್ಯಾನರ್ಜಿಯನ್ನು ಸ್ವಾಗತಿಸಿದ ನಿತೀಶ್‌ ಕುಮಾರ್‌, ಲಾಲು ಯಾದವ್

Update: 2023-06-22 21:08 IST

ಪಾಟ್ನಾ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಬೃಹತ್‌ ಸಭೆಯಲ್ಲಿ ಪಾಲ್ಗೊಳ್ಳಲು ವಿರೋಧ ಪಕ್ಷಗಳ ನಾಯಕರು ಬಿಹಾರಕ್ಕೆ ತಲುಪಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಮೊದಲಾದವರು ಪಾಟ್ನಾಗೆ ತಲುಪಿದ್ದಾರೆ.

ನಾಳೆ ನಡೆಯಲಿರುವ ವಿರೋಧ ಪಕ್ಷದ ಸಭೆಗೂ ಮುನ್ನ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಬಿಹಾರ ಸಿಎಂ ನಿತೀಶ್ ಕುಮಾರ್ ಪಾಟ್ನಾ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಪ್ರಾರ್ಥನೆ ಸಲ್ಲಿಸಲು ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ತೆರಳಿದ್ದಾರೆ.   

ಪಾಟ್ನಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ.  ಬಳಿಕ ಮಾತನಾಡಿದ ಮಮತಾ ಬ್ಯಾನರ್ಜ, ವಿರೋಧ ಪಕ್ಷಗಳು ಒಂದೇ ಕುಟುಂಬದಂತೆ ಸಾಮೂಹಿಕವಾಗಿ ಹೋರಾಡಲಿವೆ ಎಂದು ಹೇಳಿದ್ದಾರೆ. .

ವಿಪಕ್ಷಗಳ ಸಭೆಯಿಂದ ಸಕರಾತ್ಮಕ ನಿಲುವುಗಳು ಹೊರಹೊಮ್ಮಲಿವೆ. ವಿಪಕ್ಷಗಳ ಸಭೆಯಲ್ಲಿ ಉತ್ತಮ ಹಾಗೂ ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎನ್ನುವುದು ನಮ್ಮ ಆಶಯ. ದೇಶವನ್ನು ಅಪಾಯದಿಂದ ರಕ್ಷಿಸಲು ಬಿಜೆಪಿ ವಿರುದ್ಧ ಜನರು ಮತ ಚಲಾಯಿಸುತ್ತಾರೆ ಎಂದು ನಾನು ನಂಬುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Similar News