ಜೂ. 27ರವರೆಗಿನ ಪಿಣರಾಯಿ ವಿಜಯನ್ ರ ಕಾರ್ಯಕ್ರಮಗಳು ರದ್ದು
Update: 2023-06-22 22:23 IST
ತಿರುವನಂತಪುರಮ್: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರ ಜೂನ್ 27ರವರೆಗಿನ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿಯ ಕಚೇರಿ ಗುರುವಾರ ತಿಳಿಸಿದೆ.
ಅಸೌಖ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ.
ಅಮೆರಿಕ, ಕ್ಯೂಬ ಮತ್ತು ಯುಎಇಯ 12 ದಿನಗಳ ಪ್ರವಾಸದ ಬಳಿಕ, ಪಿಣರಾಯಿ ಮಂಗಳವಾರ ರಾಜ್ಯಕ್ಕೆ ಮರಳಿದ್ದರು.
ಪ್ರವಾಸದಲ್ಲಿ ಪಿಣರಾಯಿಗೆ ಸಚಿವರಾದ ಕೆ.ಎನ್. ಬಾಲಗೋಪಾಲ್, ವೀಣಾ ಜಾರ್ಜ್, ಯೋಜನಾ ಮಂಡಳಿಯ ಉಪಾಧ್ಯಕ್ಷ ವಿ.ಕೆ. ರಾಮಚಂದ್ರನ್, ಸಂಸದ ಜಾನ್ ಬ್ರಿಟ್ಟಾಸ್, ಮುಖ್ಯ ಕಾರ್ಯದರ್ಶಿ ವಿ.ಪಿ. ಜೋಯ್, ದಿಲ್ಲಿಯಲ್ಲಿ ಕೇರಳದ ಪ್ರತಿನಿಧಿ ವೇಣು ರಾಜಮೋನಿ ಮತ್ತು ಆರೋಗ್ಯ ಕಾರ್ಯದರ್ಶಿ ಎ.ಪಿ.ಎಮ್. ಮುಹಮ್ಮದ್ ಹಾನಿಶ್ ಜೊತೆ ನೀಡಿದ್ದರು.