×
Ad

ಬಾಗಲಕೋಟೆ | ಅಮೆರಿಕದಲ್ಲೇ ಕೂತು ಮನೆಕಳ್ಳತನ ತಪ್ಪಿಸಿದ ಯುವತಿ!

Update: 2025-08-28 11:34 IST

ಮನೆಕಳ್ಳತನಕ್ಕೆ ಯತ್ನಿಸುತ್ತಿರುವುದು, ಅಮೆರಿಕಾದಿಂದ ಕರೆ ಮಾಡಿದ ಯುವತಿ

ಬಾಗಲಕೋಟೆ : ಬಾಗಲಕೋಟೆಯ ಮುಧೋಳದ ಮನೆಯೊಂದರಲ್ಲಿ ಇಬ್ಬರು ವೃದ್ಧ ದಂಪತಿ ವಾಸವಾಗಿದ್ದರು. ಇದನ್ನೇ ಬಂಡವಾಳ‌ ಮಾಡಿಕೊಂಡ ಕಳ್ಳರ ಗ್ಯಾಂಗ್ ಮನೆ ಕಳ್ಳತನಕ್ಕೆ ಬಂದಿದ್ದರು. ಆದರೆ, ಇದನ್ನು ಗಮನಿಸಿದ್ದು ಆ ದಂಪತಿಯ ಅಮೆರಿಕದಲ್ಲಿ ನೆಲೆಸಿರುವ ಮಗಳು. ಮನೆ ಸಿಸಿ ಕ್ಯಾಮೆರಾ ಲಿಂಕ್ ಗಳನ್ನು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿದ್ದರು. ಕಳ್ಳರ ಎಂಟ್ರಿ ದೃಶ್ಯ ಮೊಬೈಲ್‌ನಲ್ಲಿ ಕಂಡ ಮಗಳು ಮನೆಗೆ ಕರೆ ‌ಮಾಡಿ ಎಚ್ಚರಿಸಿದ್ದಾರೆ. ಇದರಿಂದ ನಡೆಯಬೇಕಾದ ಕಳ್ಳತನ ತಪ್ಪಿದೆ.

ಒಂದು ಮನೆಯಲ್ಲಿ ಕಳ್ಳತನ ಮಾಡಿ, ಈ ವೃದ್ಧ ದಂಪತಿಯ ಮನೆಗೆ ಕಳ್ಳತನಕ್ಕೆ ಬಂದಿದ್ದರು. ಈ ವೇಳೆ ಅಮೇರಿಕದಲ್ಲಿದ್ದ ಮಗಳು ಮನೆಯ ಸಿಸಿ ಕ್ಯಾಮೆರಾವನ್ನು ನೋಡುವಾಗ ಕಳ್ಳರು ಕಳ್ಳತನಕ್ಕೆ ಯತ್ನಿಸುತ್ತಿರುವುದನ್ನು  ನೋಡಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯ ನೋಡಿ ಮನೆಯವರಿಗೆ ಕರೆ ಮಾಡಿದ್ದಾರೆ. ಎಚ್ಚೆತ್ತ ಹನುಮಂತಗೌಡ ಸಂಕಪ್ಪ ಅವರು ಬಾಗಿಲು ತೆರೆದಾಗ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೇರಿಕದಲ್ಲಿ‌ ನೆಲೆಸಿದ್ದ ಮಗಳು ಕರೆ ಮಾಡಿ ತಿಳಿಸಿದಾಗ ಹೊರಬಂದ ಹನುಮಂತಗೌಡ ಅವರು ಪೊಲೀಸರಿಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಮುಧೋಳ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ‌ ಎಂದು ತಿಳಿದು ಬಂದಿದೆ.

ಆದರೆ, ಈ ವೇಳೆ ಅದೇ ಏರಿಯಾದಲ್ಲಿರುವ ಮತ್ತೊಬ್ಬರ ಮನೆ ಕಳ್ಳತನವಾಗಿದ್ದು, ಇದೇ ಗ್ಯಾಂಗ್ ಹನುಮಂತಗೌಡ ಮನೆಗೆ ಕಳ್ಳತನ ಯತ್ನಕ್ಕೂ ಮುನ್ನ ಅಶೋಕ ಕರಿಹೊನ್ನ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದೆ. ಮನೆಯಲ್ಲಿದ್ದ 11 ಗ್ರಾಂ ಚಿನ್ನ 40 ಸಾವಿರ ರೂ. ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಮೇರಿಕದಲ್ಲಿ ನೆಲೆಸಿದ ಶೃತಿ ಅವರ ಸಮಯಪ್ರಜ್ಞೆಯಿಂದ ಅವರ ಮನೆ ಕಳ್ಳತನದಿಂದ ಬವಾಚ್ ಆಗಿದೆ. ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಎಸ್ ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News