×
Ad

ಬಾಗಲಕೋಟೆ | ಹೇರ್ ಡ್ರೈಯರ್ ಸ್ಫೋಟ : ಮಹಿಳೆಗೆ ಗಂಭೀರ ಗಾಯ

Update: 2024-11-20 12:56 IST

ಬಾಗಲಕೋಟೆ : ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲಿಯ ಇಳಕಲ್‌ನ ಬಸವನಗರದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ತನ್ನ ತಲೆಯ ಕೂದಲನ್ನು ಹೇರ್ ಡ್ರೈಯರ್ ಬಳಸಿ ಒಣಗಿಸಿಕೊಳ್ಳುತ್ತಿರುವಾಗ ಸ್ಪೋಟಗೊಂಡು  ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸ್ಪೋಟದ ರಭಸಕ್ಕೆ ಮಹಿಳೆಯ ಕೈಗಳು ತುಂಡಾಗಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡಿದ್ದ ಮಹಿಳೆಯನ್ನು  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಇಳಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News