×
Ad

ಬಾಗಲಕೋಟೆ: ಗಣ ವೇಷ ಹಾಕಿಕೊಂಡು ಕಾಂಗ್ರೆಸ್ ಸೇರಿದ ಆರೆಸ್ಸೆಸ್ ಕಾರ್ಯಕರ್ತ

Update: 2024-04-11 13:11 IST

ಬಾಗಲಕೋಟೆ: ಕಳೆದ 30 ವರ್ಷಗಳಿಂದ ಕಟ್ಟಾ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ ಗಣ ವೇಷ ಹಾಕಿಕೊಂಡೇ ಕಾಂ‌ಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಬಾಗಲಕೋಟ ಲೋಕಸಭಾ ಕ್ಷೇತ್ರದ ನರಗುಂದದಲ್ಲಿ ನಡೆದ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಬಿ.ಆರ್ ಯಾವಗಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಸಮ್ಮುಖದಲ್ಲಿ ಅವರು ಕಾಂ‌ಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಗಣ ವೇಷ ಧಾರಿ ನಿಂಗಬಸಪ್ಪ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಕಪ್ಪು ಟೋಪಿ ತೆಗೆದು (ಖಾದಿ) ಗಾಂಧಿ ಟೋಪಿ ಹಾಕಿ ಪಕ್ಷದ ನಾಯಕರು ಅವರಿಗೆ ಸ್ವಾಗತ ಕೋರಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News