×
Ad

ಬಾಗಲಕೋಟೆ: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Update: 2025-08-19 15:02 IST

ಬಾಗಲಕೋಟೆ: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ಮುಧೋಳ ತಾಲೂಕಿನ ಜುನ್ನೂರ ಗ್ರಾಮದ ಹೊಳ ಬಸಯ್ಯ ಸಂಗಯ್ಯ ಬೀಳಗಿ(30) ಮತ್ತು ಬದನ್ನೂರ ಗ್ರಾಮದ ಸಚಿನ ಹನಮಂತ ಬಡಿಗೇರ (19) ಬಂಧಿತ ಆರೋಪಿಗಳು. ಇವರಿಂದ 62.29 ಗ್ರಾಮ ಚಿನ್ನಾಭರಣ,5.40 ಲಕ್ಷ ಮೌಲ್ಯದ ಆಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬೆಳಗಿನ ಜಾವ ಮನೆ ಹತ್ತಿರ ರಂಗೋಲಿ ಬಿಡಿಸುವ ಹಾಗೂ ಕಸ ಗುಡಿಸುತ್ತಿರುವ ಮಹಿಳೆಯರನ್ನು ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ.

 ಆರೋಪಿಗಳು ಆ.15 ರಂದು ಬಾಗಲಕೋಟೆ ನವನಗರ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.‌ ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಎಸ್ ಪಿ ಸಿದ್ದಾರ್ಥ ಗೋಯಲ್ ಅವರು ರಚನೆ ಮಾಡಿದ್ದ ವಿಶೇಷ ತಂಡ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News