ಕೇಂದ್ರಿಯ ವಿಶ್ವ ವಿದ್ಯಾನಿಲಯ : ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲಬುರಗಿಯಲ್ಲಿ 2026-27ನೇ ಸಾಲಿಗಾಗಿ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಾಧ್ಯಾಪಕ ಬಸವರಾಜ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೇಶವನ್ನು ಎನ್‍ಟಿಎ-ಸಿಯುಇಟಿ ಪರೀಕ್ಷೆಯ ಮೂಲಕ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಡಿ.14 ರಿಂದ ಪ್ರಾರಂಭವಾಗಿದೆ. ಸ್ನಾತಕ ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಆಸಕ್ತ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದರು.
ಅರ್ಜಿಗಳನ್ನು https://exams.nta.nic.in/cuet-pg/ ಮೂಲಕ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ಸಲ್ಲಿಸಲು 2026ರ ಜನವರಿ 14 ಕೊನೆಯ ದಿನಾಂಕವಾಗಿದೆ. ಪ್ರವೇಶ ಪರೀಕ್ಷೆ ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು, ಮಂಗಳೂರು, ಉಡುಪಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಆಯೋಜಿಸಲಾಗಿದೆ ಎಂದರು.
ಕೇಂದ್ರೀಯ ವಿಶ್ವ ವಿದ್ಯಾನಿಲಯ ಒದಗಿಸುವ ಕೋರ್ಸ್‍ಗಳ ವಿವರ ಮತ್ತು ಅವುಗಳ ಅರ್ಹತೆಯ ವಿವರಗಳನ್ನು ವಿಶ್ವ ವಿದ್ಯಾನಿಲಯದ ವೆಬ್ ಸೈಟ್ www.cuk.ac.in , https://nta.ac.in/ , https://exams.nta.nic.in/cuet-pg/ ನಲ್ಲಿ ಲಭ್ಯವಿರುತ್ತದೆ. ಭಾಷಾ ಪ್ರಶ್ನೆ ಪತ್ರಿಕೆಗಳು ಹೊರತು ಪಡಿಸಿ, ಉಳಿದ ಎಲ್ಲ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ. ವಿದ್ಯಾರ್ಥಿಗಳು ಸಿಯುಕೆ, ಎನ್‍ಟಿಎ ವೆಬ್‍ಸೈಟ್‍ಗಳನ್ನು www.cuk.ac.in www.nta.ac.in , https://exams.nta.nic.in/cuet-pg/ ನಿರಂತರವಾಗಿ ನೋಡುತ್ತಿರಬೇಕು ಎಂದು ಬಸವರಾಜ್ ತಿಳಿಸಿದರು.
ಲಭ್ಯವಿರುವ ಸ್ನಾತಕೋತ್ತರ ಕೋರ್ಸ್‍ಗಳು:
ಎಂಎ: ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತ್ರ, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಅರ್ಥಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ., ಎಂಎಸ್ಸಿ: ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳ, ಭೂವಿಜ್ಞಾನ, ಸನ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಅಂಕಿಅಂಶಗಳು ಮತ್ತು ದತ್ತಾಂಶ ವಿಶ್ಲೇಷಣೆ, ಮನೋವಿಜ್ಞಾನ, ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್.
ವಾಣಿಜ್ಯ ಮತ್ತು ನಿರ್ವಹಣೆ: ಎಂಕಾಂ (ಬ್ಯಾಂಕಿಂಗ್ ಮತ್ತು ಹಣಕಾಸು ತಂತ್ರಜ್ಞಾನ), ಎಂಕಾಂ, ಎಂಬಿಎ, ಎಂಬಿಎ (ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ), ಸಮಾಜಕಾರ್ಯ, ಎಂಸಿಎ,
ಶಿಕ್ಷಣ ಮತ್ತು ಕಾನೂನು: ಎಲ್‍ಎಲ್‍ಎಂ, ಬಿಎಡ್, ಎಂಎಡ್, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ: ಎಂಟೆಕ್ (ಪವರ್ ಅಂಡ್ ಎನರ್ಜಿ ಇಂಜಿನಿಯರಿಂಗ್), ಎಂಟೆಕ್ (ಆರ್‌ಎಫ್ ಮತ್ತು ಮೈಕ್ರೋವೇವ್ ಇಂಜಿನಿಯರಿಂಗ್), ಎಂಟೆಕ್ (ಎಐ ಮತ್ತು ಎಂಎಲ್), ಎಂಪಿಎ ಹಿಂಸ್ತುಸ್ಥಾನಿ ಗಾಯನ, ಎಂಪಿಎ ಇನ್‍ಸ್ಟ್ರುಮೆಂಟಲ್, ಮಾಸ್ಟರ್ ಆಪ್ ವಿಷುಯಲ್ ಆಟ್ರ್ಸ್ ಪೆಂಟಿಂಗ್.