ಬೆಂಗಳೂರು | ಸೋನಮ್ ವಾಂಗ್ಚುಕ್‍ಗೆ ಬೆಂಬಲಿಸಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ
Update: 2024-04-06 20:41 IST
Photo : PTI
ಬೆಂಗಳೂರು: ಶಿಕ್ಷಣ ತಜ್ಞ ಹಾಗೂ ಸಂಶೋಧಕ ಸೋನಮ್ ವಾಂಗ್ಚುಕ್‍ಗೆ ಬೆಂಬಲ ವ್ಯಕ್ತಪಡಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಹಾಗು ಲಡಾಖಿ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪದಾಧಿಕಾರಿ ಆತ್ರಿಕಾ, ಲಡಾಖ್‍ನಲ್ಲಿ ಉಂಟಾಗಿರುವ ಹವಾಮಾನ ಕುರಿತಾದಂತಹ ಸಮಸ್ಯೆಗಳು ಮತ್ತು ನಗರದಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಇದೀಗ ಲಡಾಖ್‍ನಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಪರಿಸರ ಮತ್ತು ಸ್ಥಳೀಯ ಬುಡಕಟ್ಟುಗಳನ್ನು ರಕ್ಷಿಸಿಕೊಳ್ಳಲು ಕಾನೂನುಗಳನ್ನು ಜಾರಿಗೊಳಿಸಿ ಮತ್ತು ಖಚಿತಪಡಿಸಿಕೊಳ್ಳಲು ರಾಜ್ಯತ್ವವನ್ನು ಸ್ಥಾಪಿಸಬೇಕು ಎಂದು ಆತ್ರಿಕಾ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ನಮ್ರತಾ, ನುಪೂರ್, ಶರೀಕ್ ಹಾಗೂ ಚೀಕೂ ಭಾಗವಹಿಸಿದ್ದರು.