Bengaluru | ದಂಪತಿ ಮೇಲೆ ಹಲ್ಲೆ; ವೈದ್ಯನ ಬಂಧನ
Update: 2026-07-27 01:10 IST
ಬೆಂಗಳೂರು : ಬೆಳ್ಳಂದೂರಿನಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ದಂಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಸಾಯಿ ಕ್ಲಿನಿಕ್ ವೈದ್ಯ ಡಾ. ನಾಗೇಂದ್ರ ಬಂಧಿತ ವೈದ್ಯ ಎಂದು ತಿಳಿದು ಬಂದಿದೆ.
ವೈಟ್ ಫೀಲ್ಡ್ ಸಮೀಪದ ಬೆಟ್ಟದಾಸಪುರದಲ್ಲಿ ವಾಸವಾಗಿರುವ ಬಾಂಗ್ಲಾದೇಶ ಮೂಲದ ನಸ್ರೀನಾ ಬಿಲಾಲ್ (23) ಎಂಬ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ನಸ್ರೀನಾ ಬಿಲಾಲ್ ಹಾಗೂ ಅವರ ಪತಿ ಮಹಮ್ಮದ್ ಬಿಲಾಲ್ ಅವರು ಬಾಂಗ್ಲಾದೇಶದ ನಿವಾಸಿಗಳು ಎಂಬ ಕಾರಣಕ್ಕೆ ಡಾ. ನಾಗೇಂದ್ರ ಅವರು ದಂಪತಿಯ ಪೌರತ್ವವನ್ನು ಪ್ರಶ್ನಿಸಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ವೈದ್ಯ ನಾಗೇಂದ್ರ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.