×
Ad

ಮುಸ್ಲಿಮರಿಗೆ ಹೆಚ್ಚಿನ ಮೀಸಲಾತಿ ನೀಡುವ ಹುನ್ನಾರ: ಬಿಜೆಪಿ ಆರೋಪ

Update: 2025-04-13 18:55 IST

ಬೆಂಗಳೂರು : ‘ಅಹಿಂದ’ದಿಂದ ಮುಂದೆ ಬಂದ ಸಿದ್ದರಾಮಯ್ಯ ಅವರು ಕೊನೆಗೂ ‘ಹಿಂದ’ (ಹಿಂದುಳಿದ-ದಲಿತ)ಕ್ಕೆ ದ್ರೋಹ, ‘ಅ’(ಅಲ್ಪಸಂಖ್ಯಾತ)ಕ್ಕೆ ಮಾತ್ರ ಒಳ್ಳೆಯ ಬಹುಮಾನ ನೀಡಿದ್ದಾರೆ ಎಂದು ಬಿಜೆಪಿ ಇಂದಿಲ್ಲಿ ದೂರಿದೆ.

ರವಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಜಾತಿಗಣತಿ ಎಂಬುದು ಓಲೈಕೆ ರಾಜಕಾರಣದ ಪಿತಾಮಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ವಂಧಿಮಾಗದರು ಎಸಿ ರೂಂನಲ್ಲಿ ಕುಳಿತು ತಯಾರಿಸಿದ ವರದಿಯೇ ಹೊರತು, ಜನರ ಮನೆ ಬಾಗಿಲಿಗೆ ಹೋಗಿ ತಯಾರಿಸಿದ ವರದಿಯಲ್ಲ ಎಂಬುದು ಅಂಕಿ-ಸಂಖ್ಯೆಗಳಿಂದ ಋಜುವಾತಾಗುತ್ತಿದೆ’ ಎಂದು ಟೀಕಿಸಿದೆ.

‘ಮುಸ್ಲಿಮರನ್ನು ಕರ್ನಾಟಕದ ಅತಿ ದೊಡ್ಡ ಸಮುದಾಯ ಎಂದು ಬಿಂಬಿಸಿ ಅವರಿಗೆ ಹೆಚ್ಚಿನ ಮೀಸಲಾತಿ ಹಾಗೂ ಇನ್ನುಳಿದ ಸವಲತ್ತುಗಳನ್ನು ನೀಡುವ ಹುನ್ನಾರ ಇದು’ ಎಂದು ಬಿಜೆಪಿ ಇದೇ ಸಂದರ್ಭದಲ್ಲಿ ಆರೋಪ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News