×
Ad

ಪ್ರಹ್ಲಾದ್ ಜೋಶಿ ಸೋಲಿಸಿ ಪ್ರತಿಕಾರ ತೀರಿಸಿಕೊಳ್ಳಲು ಬಿಎಸ್‍ವೈ ಬಣ ಕಾತರಿಸುತ್ತಿದೆಯೇ?: ಕಾಂಗ್ರೆಸ್

Update: 2024-05-02 20:44 IST

ಬೆಂಗಳೂರು: ‘ಬಿಜೆಪಿಯ ಲಿಂಗಾಯತ ನಾಯಕತ್ವದ ವಿರುದ್ಧ ಸಮರ ಸಾರಿದ್ದ ಪ್ರಹ್ಲಾದ್ ಜೋಶಿಯವರನ್ನು ಸೋಲಿಸಿ ಪ್ರತಿಕಾರ ತೀರಿಸಿಕೊಳ್ಳಲು ಬಿಎಸ್‍ವೈ ಬಣ ಕಾತರಿಸುತ್ತಿದೆಯೇ? ಆ ಕಾರಣಕ್ಕಾಗಿಯೇ ಜೋಶಿ ಪರ ಪ್ರಚಾರದಿಂದ ಬಿಎಸ್‍ವೈ ದೂರ ಉಳಿದಿದ್ದಾರೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಈ ಹಿಂದೆ ಲಿಂಗಾಯತ ಸಮುದಾಯದ ಬೊಮ್ಮಯಿಯವರು ಮುಖ್ಯಮಂತ್ರಿಯಾಗಿದ್ದಾಗ‌, ಎಚ್.ಡಿ.ಕುಮಾರಸ್ವಾಮಿ ಅವರು ಪೇಶ್ವೆ ವಂಶಸ್ಥರು ಅಧಿಕಾರ ಕಸಿಯುವ ಹೊಂಚು ಹಾಕಿದ್ದಾರೆʼ ಎಂದಿದ್ದರು.

ʼಹಾಗೆಯೇ ಬಿಎಸ್‍ವೈ ಅವರ ಅಧಿಕಾರ ಕಸಿದಿದ್ದೂ ಪೇಶ್ವೆ ನಾಯಕರು ಎಂದು ಪ್ರಹ್ಲಾದ್ ಜೋಶಿಯವರ ಕುತಂತ್ರದ ರಹಸ್ಯವನ್ನು ಹೊರ ಹಾಕಿದ್ದರು. ಕುಮಾರಸ್ವಾಮಿಯವರು ಬಿಜೆಪಿಯವರ ಅಂತರಂಗದ ಸಖ, ಹಾಗಾಗಿ ಬಿಜೆಪಿ ಬಗೆಗಿನ ಅವರ ಮಾತುಗಳಲ್ಲಿ ಸತ್ಯವಿರುತ್ತದೆ’ ಎಂದು ಟೀಕಿಸಿದೆ.‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News