×
Ad

ʼಎತ್ತಿನಹೊಳೆʼ ಯೋಜನೆಯು ಗುತ್ತಿಗೆದಾರರ ಜೇಬು ತುಂಬಿದ್ದಷ್ಟೇ ಭಾಗ್ಯ : ಜೆಡಿಎಸ್ ಲೇವಡಿ

Update: 2024-05-21 19:15 IST

ಬೆಂಗಳೂರು : ‘ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಒಂದು ವರ್ಷ ತುಂಬಿದೆ. ಎತ್ತಿನಹೊಳೆ ಇನ್ನೂ ತೆವಳುತ್ತಲೇ ಇದೆ. 2014ರ ಮಾರ್ಚ್ 3ರಂದು ಚಿಕ್ಕಬಳ್ಳಾಪುರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಡಿಗಲ್ಲು ಭಾಗ್ಯ ಕಂಡ ಈ ಯೋಜನೆ ಇವತ್ತು ಅತ್ತಲೂ ಇಲ್ಲ, ಇತ್ತಲೂ ಇಲ್ಲ’ ಎಂದು ಜೆಡಿಎಸ್ ಲೇವಡಿ ಮಾಡಿದೆ.

ಮಂಗಳವಾರ ಎಕ್ಸ್‌ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಜೆಡಿಎಸ್, ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಲ ಸಂಪನ್ಮೂಲಕ್ಕಿಂತ ಬೆಂಗಳೂರು ನಗರಾಭಿವೃದ್ಧಿ ಮೇಲೆಯೇ ಆಸಕ್ತಿ ಜಾಸ್ತಿ. ಒಮ್ಮೆಯಷ್ಟೇ ಎತ್ತಿನಹೊಳೆಗೆ ಕಾಟಾಚಾರದ ಭೇಟಿ ನೀಡಿದ್ದ ಅವರು, ಹೂತಿಟ್ಟ ನಿಧಿಯಂತಿರುವ ರಾಜಧಾನಿಯನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಅತ್ಯುತ್ಸಾಹ ತೋರುತ್ತಿದ್ದಾರೆ’ ಎಂದು ಟೀಕಿಸಿದೆ.

‘ಕಳಪೆ ಕಾಮಗಾರಿ, ಅಧಿಕಾರಿ-ಮಂತ್ರಿಗಳ ನಿರ್ಲಕ್ಷ್ಯದಿಂದ ಇಡೀ ಯೋಜನೆ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ. ಪೈಪುಗಳು ತುಕ್ಕು ಹಿಡಿಯುತ್ತಿದ್ದರೆ, ತಡೆಗೋಡೆಗಳು ಕುಸಿದು ಬೀಳುತ್ತಿವೆ. 10 ವರ್ಷ ಕಳೆದರೂ ಹನಿ ನೀರೂ ಹರಿಯುವ ನಿರೀಕ್ಷೆ ಇಲ್ಲ. ಗುತ್ತಿಗೆದಾರರ ಜೇಬು ತುಂಬಿದ್ದಷ್ಟೇ ಭಾಗ್ಯ’ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News