×
Ad

ಹರೀಶ್ ಪೂಂಜಾ ಅವರೇ, ಶಾಸಕ ಸ್ಥಾನದ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ : ದಿನೇಶ್ ಗುಂಡೂರಾವ್

Update: 2024-06-01 21:07 IST

Photo: X/Dineshgundurao

ಬೆಂಗಳೂರು : ‘ಶಾಸಕ ಹರೀಶ್ ಪೂಂಜಾ ಅವರೇ, ನೀವು ಕಾನೂನು ಚೌಕಟ್ಟಿನಿಂದ ಏನು ಹೊರತಾಗಿಲ್ಲ. ಆರೋಪಿಯನ್ನು ಬಂಧಿಸಿದರೆ ಶಾಸಕರಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಬಹುದೇ? ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ಪುಡಿ ರೌಡಿ ರೀತಿ ವರ್ತಿಸದೆ, ಇನ್ನು ಮುಂದೆ ಆದರೂ ಶಾಸಕ ಸ್ಥಾನದ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

ಶನಿವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಶಾಸಕ ಸ್ಥಾನವನ್ನು ಅಹಂಕಾರಿ ಪ್ರವೃತ್ತಿಯಲ್ಲಿ ತೋರ್ಪಡಿಸುತ್ತಿರುವ ಹರೀಶ್ ಪೂಂಜಾ ಅವರಿಗೆ ನ್ಯಾಯಾಲಯ ಚೆನ್ನಾಗಿಯೇ ಚಾಟಿ ಬೀಸಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಕ್ಕೆ, ಪೊಲೀಸರಿಗೆ ಬೆದರಿಕೆ ಹಾಕುವ ಹರೀಶ್ ಪೂಂಜಾ ಅವರೇ, ನೀವು ಕಾನೂನು ಚೌಕಟ್ಟಿನಿಂದ ಏನು ಹೊರತಾಗಿಲ್ಲ ಎಂದು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News