×
Ad

ಕೈಗಾ, ಕೆಆರ್‌ಎಸ್‍ಗೆ ಮತ್ತಷ್ಟು ಭದ್ರತೆ : ಡಾ.ಜಿ.ಪರಮೇಶ್ವರ್

Update: 2025-05-08 20:06 IST

ಬೆಂಗಳೂರು: ರಾಯಚೂರು, ಕೈಗಾ, ಕೆಆರ್‌ಎಸ್‍ಗೆ ಭದ್ರತೆ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ಇಲ್ಲಿನ ಸದಾಶಿವನಗರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತೆಗೆ ವಿಶೇಷ ಪಡೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ರಾಯಚೂರು, ಕೈಗಾ, ಕೆ.ಆರ್.ಎಸ್​ಗೆ ಭದ್ರತೆ ಹೆಚ್ಚಿಸಲಾಗಿದೆ ಎಂದರು.

ನಿನ್ನೆ ಮಾಕ್ ಡ್ರಿಲ್ ಸಂಬಂಧ ಕೇಂದ್ರದಿಂದ ಸೂಚನೆ ಬಂದಿತ್ತು. ಮೂರು ಜಿಲ್ಲೆಯಲ್ಲಿ ಮಾಡುವಂತೆ ಸೂಚನೆ ಬಂದಿತ್ತು. ಹೆಚ್ಚುವರಿಯಾಗಿ ಮೈಸೂರು ಆಯ್ಕೆ ಮಾಡಿಕೊಂಡಿದ್ದೇವೆ. ಎಲ್ಲ ಜಿಲ್ಲೆಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೇವೆ. ಎಸ್ಪಿಗಳಿಗೆ ಭದ್ರತೆ ಬಗ್ಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News