×
Ad

RSS ಪ್ರಧಾನ ಕಚೇರಿ ಐಷಾರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ ಟ್ವೀಟ್‌

"ತೆರಿಗೆ ತಪ್ಪಿಸುವುದು ರಾಷ್ಟ್ರವಿರೋಧಿಯಲ್ಲವೇ"

Update: 2025-12-11 15:16 IST

PC | X@PriyankKharge

ಬೆಂಗಳೂರು, ಡಿ.11: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಕ್ಕೆ ಹರಿದುಬರುತ್ತಿರುವ ದೇಣಿಗೆ ಹಾಗೂ ಅದು ನೋಂದಣಿಯಿಲ್ಲದ ಸಂಸ್ಥೆಯಾಗಿಯೇ ಮುಂದುವರಿಯುತ್ತಿರುವ ವಿಷಯವನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ.

ದಿಲ್ಲಿಯಲ್ಲಿರುವ RSSನ ನೂತನ ಪ್ರಧಾನ ಕಚೇರಿ ‘ಕೇಶವ್ ಕುಂಜ್’ ಬಹುಮಹಡಿ ಕಟ್ಟಡದ ಚಿತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, “ಮೊದಲ ನೋಟಕ್ಕೆ ಇದು ಐಷಾರಾಮಿ ಹೋಟೆಲ್ ಅಥವಾ ಉನ್ನತ ದರ್ಜೆಯ ಅಪಾರ್ಟ್‌ಮೆಂಟ್ ಸಂಕೀರ್ಣದಂತೆ ಕಾಣುತ್ತದೆ. ಆದರೆ ಇದು ಆರ್‌ಎಸ್‌ಎಸ್ ಪ್ರಧಾನ ಕಚೇರಿ” ಎಂದು ಪೋಸ್ಟ್ ಮಾಡಿದ್ದಾರೆ.

ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡಕ್ಕೆ 5 ರೂಪಾಯಿಯಿಂದ ಲಕ್ಷದವರೆಗೆ ‘ಗುರುದಕ್ಷಿಣೆ’ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ ಎನ್ನುವ ವರದಿಗಳನ್ನು ಉಲ್ಲೇಖಿಸಿರುವ ಅವರು, “ನೋಂದಣಿಯಾಗದ ಎನ್‌ಜಿಒ ಆಗಿರುವ ಆರ್‌ಎಸ್‌ಎಸ್ ಭಗವಧ್ವಜ ಹೆಸರಿನಲ್ಲಿ ತನ್ನ ಸ್ವಯಂಸೇವಕರಿಂದ ನಿಧಿ ಸಂಗ್ರಹಿಸುತ್ತದೆ. ದಕ್ಷಿಣೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹಿಸಿ ತೆರಿಗೆ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಇದು ರಾಷ್ಟ್ರವಿರೋಧಿ ಚಟುವಟಿಕೆ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆಯ ಈ ಆರೋಪಗಳ ಕುರಿತು RSS ಪ್ರತಿಕ್ರಿಯೆ ನೀಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News