×
Ad

‘ಬೇಲೂರು ಘಟನೆ’ ಮುಂದಿನ ಪರಿಣಾಮಗಳಿಗೆ ಸರಕಾರವೇ ಹೊಣೆ : ವಿಜಯೇಂದ್ರ

Update: 2025-09-21 18:56 IST

ಬೆಂಗಳೂರು, ಸೆ. 21 : ‘ಬೇಲೂರಿನಲ್ಲಿ ಗಣೇಶಮೂರ್ತಿಗೆ ಅವಮಾನ ಮಾಡಿದ ಪ್ರಕರಣದಲ್ಲಿ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಸರಕಾರ ಕಾನೂನು ಕ್ರಮ ಜರುಗಿಸಲಿ. ಸಮುದಾಯದ ಸಹನೆ ಹಾಗೂ ತಾಳ್ಮೆಯನ್ನು ಸರಕಾರ ದೌರ್ಬಲ್ಯವೆಂದು ಉದಾಸೀನ ತೋರಿದರೆ ಮುಂದಿನ ಪರಿಣಾಮಗಳಿಗೆ ಸರಕಾರವೇ ಹೊಣೆಯಾಗಬೇಕಾದೀತು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ದೇವಸ್ಥಾನ ಹಾಗೂ ಹಿಂದೂ ಶ್ರದ್ಧಾ ಕೇಂದ್ರಗಳನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಉಪೇಕ್ಷಿಸಿ ತಾತ್ಸಾರ ಧೋರಣೆ ಅನುಸರಿಸುತ್ತಿದೆ. ಇದನ್ನು ಅರಿತಿರುವ ವಿರೋಧಿ ಶಕ್ತಿಗಳು ದೇವಸ್ಥಾನಗಳು ಹಾಗೂ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ವಿಕೃತಿ ಮೆರೆಯುತ್ತಿವೆ’ ಎಂದು ದೂರಿದ್ದಾರೆ.

‘ಗಣೇಶೋತ್ಸವದ ಮೇಲೆ ಕಲ್ಲು ತೂರುವುದು, ದೇವರ ವಿಗ್ರಹಗಳನ್ನು ಮಲಿನಗೊಳಿಸುವ ದುರ್ವರ್ತನೆಗಳಲ್ಲಿ ತೊಡಗಿದ್ದು, ಇದರ ಮುಂದುವರಿದ ಭಾಗವಾಗಿ ಬೇಲೂರಿನಲ್ಲಿನ ಐತಿಹಾಸಿಕ ಗಣೇಶ ದೇವಾಲಯಕ್ಕೆ ನುಗ್ಗಿ ವಿಗ್ರಹದ ಮೇಲೆ ಚಪ್ಪಲಿಗಳನ್ನು ಇರಿಸಿ ನೀಚ ವಿಕೃತಿ ಮೆರೆದಿರುವ ಘಟನೆ ಅತ್ಯಂತ ಹೇಯ ಹಾಗೂ ಖಂಡನೀಯ’ ಎಂದು ಅವರು ಟೀಕಿಸಿದ್ದಾರೆ.

‘ಗಣೇಶನಮೂರ್ತಿಯನ್ನು ಪೊಲೀಸ್ ವ್ಯಾನ್ ಹತ್ತಿಸಿದ್ದಾಯ್ತು, ಗಣೇಶನ ಮೂರ್ತಿಗೆ ಕಲ್ಲು ತೂರಾಟ ಆಯ್ತು, ಇದೀಗ ಹಾಸನದ ಬೇಲೂರಿನಲ್ಲಿ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದಲ್ಲಿ ಹಿಂದೂಗಳು ಇನ್ನೂ ಏನೇನು ಘೋರ ನೋಡಬೇಕೋ, ಹಿಂದೂಗಳು ಇನ್ನೆಷ್ಟು ಅವಮಾನ ಸಹಿಸಿಕೊಳ್ಳಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಸರಕಾರ ಇರುವವರೆಗೂ ಹಿಂದುಗಳಿಗೆ ನೆಮ್ಮದಿ ಇಲ್ಲ’

-ಆರ್.ಅಶೋಕ್ ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News