ಪಾರದರ್ಶಕತೆ ಸಾಬೀತಿಗೆ ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್‍ರಿಂದ ಲೆಕ್ಕಪರಿಶೋಧನೆಗೆ ಕಸಾಪ ನಿರ್ಧಾರ
ಬೆಂಗಳೂರು, ಅ.11: ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್ ಅವರಿಂದ ಲೆಕ್ಕ ಪರಿಶೋಧನೆ ನಡೆಸಿ ಕನ್ನಡ ಸಾಹಿತ್ಯ ಪರಿಷತ್‍ನ ಪಾರದರ್ಶಕತೆ ಸಾಬೀತು ಮಾಡಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.
ಪರಿಷತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಪಾರದರ್ಶಕವಾಗಿ ನಡೆದು ಕೊಂಡು ಬಂದ ಸಂಸ್ಥೆಯಾಗಿದ್ದು, ಸಾರ್ವಜನಿಕ ರುಜುತ್ವದ ಉನ್ನತ ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಸ್ವಚ್ಚ ಆಡಳಿತ ಮತ್ತು ಪಾರದರ್ಶಕತೆಯನ್ನು ಸಾಬೀತು ಮಾಡಲು ಕಸಾಪ ಮಾಡಿದ ವೆಚ್ಚವೂ ಸೇರಿದಂತೆ ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಖರ್ಚು-ವೆಚ್ಚ ಹಾಗೂ 2023-24ನೇ ಸಾಲಿನ ಆರ್ಥಿಕ ವರ್ಷದ ಪರಿಷತ್‍ನ ಆರ್ಥಿಕ ವಹಿವಾಟನ್ನು ಕೇಂದ್ರ ಸರಕಾರದ ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್ ಅವರಿಂದ ಲೆಕ್ಕ ಪರಿಶೋಧನೆಗೊಳಿಸಲು ಜಮಖಂಡಿಯಲ್ಲಿ ನಡೆದ ಪರಿಷತ್ ಕಾರ್ಯಕಾರಿ ಸಮಿತಿಯ ನಿರ್ಧಾರದಂತೆ ತೀರ್ಮಾನಿಸಲಾಗಿದೆ.
ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್ ಅವರಿಗೆ ಪತ್ರ ಬರೆಯಲಾಗಿದ್ದು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅವರ ಒಪ್ಪಿಗೆ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಲೆಕ್ಕ ಪರಿಶೋಧನೆ ನಡೆಯುವ ಸಂಭವವಿದೆ. ಈ ಲೆಕ್ಕ ಪರಿಶೋಧನೆಯಿಂದ ಆರ್ಥಿಕ ಪಾರದರ್ಶಕತೆಯನ್ನು ಪಡೆದು ಪರಿಶುದ್ಧತೆಯ ಉನ್ನತ ಪರಂಪರೆಯನ್ನು ಮಂದುವರಿಸಲು ಈ ಮೂಲಕ ಪರಿಷತ್‍ನ ಕಾರ್ಯಕಾರಣಿ ತೀರ್ಮಾನಿದೆ ಎಂದು ಪ್ರಕಟನೆ ತಿಳಿಸಿದೆ.