ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನವಾಗಿದ್ದು, ಕೆಲವೆಡೆ ಬೇಲಿ ಹಾಕಲಾಗುವುದಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Screengrab:X/@JoshiPralhad
ಬೆಂಗಳೂರು: ನಮ್ಮ ದೇಶದೊಳಗೆ ಉಗ್ರರು ಹೇಗೆ ಬಂದರು, ಇದು ಭದ್ರತಾ ವೈಫಲ್ಯ ಎಂದು ಟೀಕೆ ಮಾಡುತ್ತಾರೆ. ಆದರೆ ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನವಾಗಿದ್ದು, ಕೆಲವೆಡೆ ಬೇಲಿ ಹಾಕಲಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ರವಿವಾರ ನಗರದ ಎಫ್‍ಕೆಸಿಸಿಐ ಸಭಾಂಗಣದಲ್ಲಿ ಶ್ರೀ ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ʼಬದುಕುಳಿದವರು ಕಂಡಂತೆʼ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮದೂ ಇಸ್ರೇಲ್‍ನಂತೆಯೇ ಗೆದ್ದ ಇತಿಹಾಸ ಹೊರತು ಸೋತ ಇತಿಹಾಸವಲ್ಲ. ಆದರೆ ಇತಿಹಾಸ ಪಾಠದಲ್ಲಿ ಇದನ್ನೆಲ್ಲ ಹೇಳಿಕೊಡುತ್ತಿಲ್ಲ. ನಮ್ಮಲ್ಲಿ ಮೊದಲಿನಿಂದ ಮಾನಸಿಕ ಗುಲಾಮಿತನ ಬೆಳೆಸಿದ್ದಾರೆ. ನಮ್ಮ ದೇಶದೊಳಗೆ ಉಗ್ರರು ಹೇಗೆ ಬಂದರು, ಇದು ಭದ್ರತಾ ವೈಫಲ್ಯ ಎಂದು ಟೀಕೆ ಮಾಡುತ್ತಾರೆ. ಆದರೆ ನಮ್ಮ ಗಡಿಗಳ ಭೌಗೋಳಿಕ ಪರಿಸ್ಥಿತಿ ಭಿನ್ನವಾಗಿದೆ. ಕೆಲವೆಡೆ ಭದ್ರವಾದ ಬೇಲಿಯಿದೆ.ಇನ್ನು ಕೆಲವೆಡೆ ಹಾಗೆ ಬೇಲಿ ಹಾಕಲಾಗುವುದಿಲ್ಲ ಎಂದು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ತೇಜಸ್ವಿ ಸೂರ್ಯ, ಇಸ್ರೇಲಿನ ಕಾನ್ಸುಲ್ ಜನರಲ್ ಒರ್ಲಿ ಮೆಯಿಟ್ಜ್ಮನ್, ಪತ್ರಕರ್ತ ವಿಶ್ವೇಶ್ವರ ಭಟ್ ಸೇರಿದಂತೆ ಪ್ರಮುಖರಿದ್ದರು.