‘ವಿಷವನ್ನು ಜೇನಾಗಿ ಪರಿವರ್ತಿಸಲು ಸಾಧ್ಯವೇ?’ : ಆರೆಸ್ಸೆಸ್ ವಿರುದ್ದ ಸಚಿವ ಮಹದೇವಪ್ಪ ವಾಗ್ದಾಳಿ
Update: 2025-08-24 18:54 IST
ಎಚ್.ಸಿ.ಮಹದೇವಪ್ಪ
ಬೆಂಗಳೂರು, ಆ. 24: ‘ವಿಷವನ್ನು ಜೇನಾಗಿ ಪರಿವರ್ತಿಸಲು ಸಾಧ್ಯವೇ’ ಎಂದು ಹಿಂದೊಮ್ಮೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್)ದ ಮನುವಾದಿ ಗುಣದ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಆ ಮಾತನ್ನು ನಾವು ಎಂದಿಗೂ ಮರೆಯಬಾರದು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಜೊತೆಗೆ ನಾಯಿಯನ್ನು ನಾರಾಯಣ ಎಂದು, ಕೋತಿಯನ್ನು ಹನುಮನೆಂದು, ಹಂದಿಯನ್ನು ವರಾಹನೆಂದು, ಗೋವನ್ನು ಮಾತೆಯೆಂದು ಪೂಜಿಸುವ ಈ ಜನ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವುದಿಲ್ಲ, ಕುಡಿಯಲು ನೀರನ್ನೂ ಕೊಡುವುದಿಲ್ಲ ಎಂಬ ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ಮಾತು ಈ ಹೊತ್ತಿಗೂ ಅನ್ವಯಿಸುತ್ತದೆ ಎಂಬುದಕ್ಕೆ ನಮಗೆ ಹಲವಾರು ಉದಾಹರಣೆಗಳು ದೊರೆಯುತ್ತವೆ’ ಎಂದು ಉಲ್ಲೇಖಿಸಿದ್ದಾರೆ.